ಲಯನ್ಸ್ ಸಂಸ್ಥೆಯಿಂದ ಸಮಾಜ ಸೇವೆ

ನಂಜನಗೂಡಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ವಾಕ್ ಮತ್ತು ಶ್ರವಣ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದ ಮೊಬೈಲ್ ಯೂನಿಟ್ ವಾಹನಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ ನೀಡಿದರು. ಗೋಪಾಲಕೃಷ್ಣ, ಚಂದ್ರಶೇಖರ್, ನಾಗರಾಜು ಇದ್ದರು.
12NGD1
Published on

ನಂಜನಗೂಡು: ಲಯನ್ಸ್ ಸಂಸ್ಥೆಯು ಮೊಬೈಲ್ ಯೂನಿಟ್ ವಾಹನದ ಮೂಲಕ ಗ್ರಾಮೀಣ ಭಾಗದಲ್ಲಿ ವಾಕ್ ಮತ್ತು ಶ್ರವಣ ತಪಾಸಣೆ, ಚಿಕಿತ್ಸಾ ಶಿಬಿರ ಏರ್ಪಡಿಸಿ ಬಡವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಗರದ ಬೈಪಾಸ್ ರಸ್ತೆಯಲ್ಲಿರುವ ಮಹದೇಶ್ವರ ಪ್ಯಾಲೇಸ್ ಬಳಿ ಲಯನ್ಸ್ ಕ್ಲಬ್ ವತಿಯಿಂದ ವಾಕ್ ಮತ್ತು ಶ್ರವಣ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದ ಮೊಬೈಲ್ ಯೂನಿಟ್ ವಾಹನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಲಯನ್ಸ್ ಸಂಸ್ಥೆ ಕಣ್ಣಿನ ತಪಾಸಣಾ ಶಿಬಿರ, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಬಡವರಿಗೆ ನೆರವಾಗುತ್ತಿದೆ. ಅನೇಕ ಸರ್ಕಾರಿ ಶಾಲೆಗಳಿಗೆ ಸವಲತ್ತು ಒದಗಿಸುವ ಜತೆಗೆ ಅಂಗವಿಕಲರು ಹಾಗೂ ಅಶಕ್ತರಿಗೆ ನೆರವು ನೀಡುವ ಮೂಲಕ ತನ್ನ ಸೇವಾ ಕಾರ್ಯವನ್ನು ಮುಂದುವರಿಸುತ್ತಿದೆ. ಈಗ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ನೆರವು ನೀಡಲು ಮೊಬೈಲ್ ಯೂನಿಟ್ ವಾಹನದ ಮೂಲಕ ಉಚಿತ ಶಿಬಿರ ಏರ್ಪಡಿಸಿದೆ. ಇಂತಹ ಕಾರ್ಯಗಳು ಸದಾ ನಡೆಯಲಿ ಎಂದು ಆಶಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗೋಪಾಲಕೃಷ್ಣ, ಡಾ.ಎಸ್.ಆರ್.ಚಂದ್ರಶೇಖರ್, ಎನ್.ನಾಗರಾಜು, ಉಮೇಶ್, ಅಂಬಿ, ಬಸವಣ್ಣ, ಲಯನ್ ಮಂಜುನಾಥ್, ನಂಜುಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net