ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಕೆ.ಮಂಜುನಾಥ್ ಸಿಂಗ್ ಬೇಸರ

24..Pyp.02
Published on

ಪಿರಿಯಾಪಟ್ಟಣ: ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕ್ರಿಯಾಶೀಲರಾಗಬೇಕಿದೆ ಎಂದು ಪಿರಿಯಾಪಟ್ಟಣ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಕೆ.ಮಂಜುನಾಥ್‌ಸಿಂಗ್ ಅಭಿಪ್ರಾಯಪಟ್ಟರು.


ಪಿರಿಯಾಪಟ್ಟಣ ಲಯನ್ಸ್ ಕ್ಲಬ್ ವತಿಯಿಂದ ಭಾನುವಾರ ತಾಲೂಕಿನ ಕಗ್ಗುಂಡಿ ಬಳಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಆವರಣದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವನ ನಿರ್ಲಕ್ಷೃದಿಂದಾಗಿ ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲಿನ ನಿರಂತರ ಶೋಷಣೆಯಿಂದ ಹವಾಮಾನ ವೈಪರೀತ್ಯಗಳನ್ನು ಎದುರಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.


ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ಲಯನ್ಸ್ ಕ್ಲಬ್ ಖಜಾಂಚಿ ಲವಕುಮಾರ್, ವಲಯ ಮೇಲ್ವಿಚಾರಕ ಕೆ.ಎ.ಮಹದೇವಪ್ಪ, ಸದಸ್ಯರಾದ ಪಿ.ಕೆ.ಕುಮಾರ್, ಜೆ.ಗಿರೀಶ್, ಪಿ.ಕೆ.ವಿಜಯಕುಮಾರ್, ಆನಂದ್, ಸ್ವಾಮಿ, ವಿರೇಶ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್, ಡಿಪೋ ವ್ಯವಸ್ಥಾಪಕ ದರ್ಶನ್, ಪ್ರಕಾಶ್, ಪುರಸಭೆ ಸದಸ್ಯರಾದ ಪಿ.ಸಿ.ಕೃಷ್ಣ, ನಿರಂಜನ್, ಪ್ರಕಾಶ್ ಸಿಂಗ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net