ಲಯನ್ಸ್ ಅಕಾಡೆಮಿ ಶಾಲೆಗೆ ಬಹುಮಾನ

12 SARAG 3
Published on

ಸರಗೂರು: ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ 2023-24ನೇ ಸಾಲಿನ ಸರಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ಲಯನ್ಸ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಬಹುಮಾನ ಪಡೆದಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಿಮಿಕ್ರಿ, ಭಕ್ತಿಗೀತೆ, ಅಭಿನಯ ಗೀತೆ ಮತ್ತು ಲಘು ಸಂಗೀತ(ಪ್ರಥಮ), ಕನ್ನಡ ಕಂಠಪಾಠ, ಕಥೆ ಹೇಳುವ ಸ್ಪರ್ಧೆ(ದ್ವಿತೀಯ), ಛಧ್ಮವೇಷ, ಇಂಗ್ಲಿಷ್ ಕಂಠಪಾಠ ಸ್ಪರ್ಧೆ(ತೃತೀಯ) ಬಹುಮಾನ ಪಡೆದಿದೆ. ಪ್ರೌಢಶಾಲಾ ವಿಭಾಗದಲ್ಲಿ ರಂಗೋಲಿ, ಕವಾಲಿ, ಜಾನಪದ ನೃತ್ಯ, ಜಾನಪದ ಗೀತೆ, ಭರತನಾಟ್ಯ ಮತ್ತು ಲಘು ಸಂಗೀತದಲ್ಲಿ(ಪ್ರಥಮ), ಛದ್ಮವೇಷ, ಗಜಲ್, ಧಾರ್ಮಿಕ ಪಠಣ ಸ್ಪರ್ಧೆ(ದ್ವಿತೀಯ), ಆಶುಭಾಷಣ, ಹಿಂದಿ ಕಂಠಪಾಠ, ಚಿತ್ರಕಲೆ, ಭಾವಗೀತೆ ಸ್ಪರ್ಧೆ (ತೃತೀಯ)ಯಲ್ಲಿ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ದಾಸಚಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net