

ತರೀಕೆರೆ: ಪಟ್ಟಣ, ಲಕ್ಕವಳ್ಳಿ, ಹಲಸೂರು, ರೋಪ್‌ಲೈನ್, ತಣಿಗೇಬೈಲು, ವರ್ತೆಗುಂಡಿ, ಸಂತವೇರಿ, ತಿಮ್ಮನಬೈಲು ಇತರ ಗ್ರಾಮಗಳಲ್ಲಿ ಮಲಯಾಳಿ ಭಾಷಿಕರು ಶುಕ್ರವಾರ ತಿರುಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸತತ 10 ದಿನಗಳ ಕಾಲ ಮನೆಯ ಆವರಣದಲ್ಲಿ ಚಿತ್ತಾಕರ್ಷಕ ಹೂವಿನ ರಂಗೋಲಿ (ಪೂಕಳಂ) ರಚಿಸಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದ ಮಲಯಾಳಿ ಭಾಷಿಕರು ಮಹಾಬಲಿ ಚಕ್ರವರ್ತಿಯನ್ನು ವಿಶೇಷವಾಗಿ ಪೂಜಿಸಿ ಮನೆಗೆ ಆಕರ್ಷಕ ರಂಗೋಲಿ ಮೂಲಕ ಬರಮಾಡಿಕೊಂಡರು. ವಿವಿಧ ಖಾದ್ಯ ತಯಾರಿಸಿ ಮನೆಮಂದಿ ಸಾಮೂಹಿಕವಾಗಿ ಸವಿದರಲ್ಲದೆ, ಅಕ್ಕಪಕ್ಕದ ಮನೆಯವರು ಸಂಬಂಧಿಕರ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು