ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ ರೂಪದರ್ಶಿಯರು

1 (1)
Published on

ಬೆಂಗಳೂರು:
ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನಡೆದ ಮೂರನೇ ಆವೃತ್ತಿಯ ‘ಮಿಸ್ಟರ್ ಆೃಂಡ್ ಮಿಸೆಸ್ ಸೌತ್ ಇಂಡಿಯಾ ಐ ಆೃಮ್ ಪವರ್‌ುಲ್’ ಕಾರ್ಯಕ್ರಮದಲ್ಲಿ 21 ರೂಪದರ್ಶಿಯರು ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿ ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರರಾದರು.
ಲಲನೆಯರ ಬಿಂಕ, ಬಿನ್ನಾಣದ ನಡೆಗೆ ಮನಸೋತ ಫ್ಯಾಷನ್ ಪ್ರಿಯರು, ಕಿಕ್ಕಿರಿದು ಸೇರಿದ್ದ ಸಭಾಂಗಣದಲ್ಲಿ ಮಾರ್ಜಾಲ ನಡಿಗೆಗೆ ಕರತಾಡನಗಳ ಪ್ರೋತ್ಸಾಹ ನೀಡಿದರು.

ದಿವ್ಯಾ ನವೀನ್ ಅವರು ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್ ಕಿರೀಟ ಧರಿಸಿದರೆ, ಶ್ರೀದೇವಿ ಅಪ್ಪಾಚ ಮಿಸೆಸ್ ಕರ್ನಾಟಕ ಕರ್ವಿ ಸ್ಪರ್ಧೆಯಲ್ಲಿ ವಿಜೇತರಾದರು. ಮಿಸ್ಟರ್ ಸೌತ್ಇಂಡಿಯಾ ಐ ಆಮ್ ಪವರ್‌ಫುಲ್ ಕರ್ನಾಟಕದಲ್ಲಿ ಜೈ ಸೂರ್ಯಾ ಆಜಾದ್ ವಿಜೇತರಾದರು. ಭಾರತೀಯ ಸಾಂಪ್ರದಾಯವನ್ನು ಎತ್ತಿಹಿಡಿಯುವ ‘ಎಥ್‌ನಿಕ್’ ಸುತ್ತಿನಲ್ಲಿ ರೂಪದರ್ಶಿಯರು ರ‌್ಯಾಂಪ್ ಮೇಲೆ ಹೆಜ್ಜೆಹಾಕುವ ಮೂಲಕ ರಂಗು ತುಂಬಿದರು. ಮಿಸೆಸ್ ಕರ್ನಾಟಕ, ಮಿಸೆಸ್ ತಮಿಳುನಾಡು, ಮಿಸೆಸ್ ಆಂಧ್ರಪ್ರದೇಶ ಸುತ್ತಿನಲ್ಲಿ ಬೆಡಗಿಯರು ತಮ್ಮ ತಮ್ಮ ರಾಜ್ಯವನ್ನು ಪ್ರತಿನಿಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net