ರೋಣದಲ್ಲಿ ಪ್ರತಿಭಟನೆ 26ರಂದು

Published on

ರೋಣ: ಮೈಸೂರಿನ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರದ ಬಗ್ಗೆ ತನಿಖೆ ನಡೆಸಲು ಅನುಮತಿ ಕೊಟ್ಟಿರುವ ರಾಜ್ಯಪಾಲರ ನಡೆ ಖಂಡಿಸಿ ಪಟ್ಟಣದಲ್ಲಿ ಆ.26ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಜಗ್ಗಲ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸಿ.ಎಂ. ವಿರುದ್ಧ ಅಭಿಯೋಜನೆಗೆ ಅನುಮತಿ ಕೊಟ್ಟಿರುವುದು ಅಕ್ಷಮ್ಯ ಎಂದರು. ಪಟ್ಟಣದ ಸಿದ್ಧಾರೂಢ ಮಠದಿಂದ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕುಮಾರ ಯಂಡಿಗೇರಿ, ತಿಪ್ಪಣ್ಣ ಕುರಿ, ಷಡಕ್ಷರಿ ಯಲಿಗಾರ, ಸುರೇಶ ಗಡ್ಡಿ, ಶರಣಪ್ಪ ಕುರಿಯವರ, ಬಸವರಾಜ ಮುಗಳಿ, ಯಲ್ಲಪ್ಪ ಕುರಡಗಿ, ಶರಣಪ್ಪ ಹತ್ತಿಕಟಗಿ, ನಾಗರಾಜ ಧರ್ಮರ, ಭೀಮಪ್ಪ ಜೋಗಿ, ಮುತ್ತಪ್ಪ ಕೊಪ್ಪದ, ರವೀಂದ್ರನಾಥ ರೋಣದ, ರಮೇಶ ಕೊಪ್ಪದ, ಸಂತೋಷ ಅಬ್ಬಿಗೇರಿ, ಶಿವರಾಜ ಮಣ್ಣೂರ, ಬಾಲಚಂದ್ರ ಹಕ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net