ರೋಗಿಗಳಿಗೆ ವೈದ್ಯರು ಆತ್ಮಸ್ಥೈರ್ಯ ತುಂಬಲಿ

04 KRN-1
Published on

ಕೆ.ಆರ್.ನಗರ: ವೈದ್ಯ ವೃತ್ತಿ ಅತ್ಯಂತ ಪವಿತ್ರವಾದದ್ದು. ವೈದ್ಯರು ಮಾತೃ ಹೃದಯಿ ಮನೋಭಾವದಿಂದ ಕೆಲಸ ಮಾಡಿದರೇ ರೋಗಿಗಳನ್ನು ಗುಣಪಡಿಸುವುದು ಸುಲಭವಾಗುತ್ತದೆ ಎಂದು ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಚಂದ್ರಕಲಾ ಹೇಳಿದರು.


ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞೆಯಾಗಿ ಕರ್ತವ್ಯ ನಿರ್ವಹಿಸಿ ಬೆಳಗಾವಿಗೆ ವರ್ಗಾವಣೆಯಾದ ಡಾ.ಸುಷ್ಮಿತಾ ಪಿ.ಬಳೆ ಅವರಿಗೆ ಶುಕ್ರವಾರ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ಸನ್ಮಾನ ಮತ್ತು ಬೀಳ್ಕೊಡುಗೆ ಸಭೆಯನ್ನು ಕುರಿತು ಮಾತನಾಡಿದ ಅವರು, ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಚಿಕಿತ್ಸೆಯ ಜತೆಗೆ ಆತ್ಮಸ್ಥೈರ್ಯ ತುಂಬವ ಕೆಲಸವನ್ನು ವೈದ್ಯರು ಮಾಡಿದಾಗ ಅವರ ಮಾನಸಿಕ ಬಲ ಹೆಚ್ಚಾಗಿ ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದರು.
ಆಸ್ಪತ್ರೆಯ ಎಲ್ಲ ವೈದ್ಯರು ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮವಾದ ಚಿಕಿತ್ಸೆ ಮತ್ತು ಸೌಲಭ್ಯಗಳು ದೊರೆಯುತ್ತಿರುವುದರಿಂದ ನಮ್ಮ ತಾಲೂಕಿನವರಲ್ಲದೇ ಇತರೆ ಜಿಲ್ಲೆಗಳು ಗರ್ಣಿಣಿಯರು, ರೋಗಿಗಳು ನಮ್ಮಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ನಮ್ಮ ಆಸ್ಪತ್ರೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಂ.ಎಸ್.ನಾಗೇಂದ್ರ, ಪ್ರಸೂತಿ ತಜ್ಞೆಯರಾದ ಡಾ.ಭವಾನಿ, ಡಾ.ದಿವ್ಯತ, ಮಕ್ಕಳ ತಜ್ಞರಾದ ಡಾ.ಚಂದ್ರಶೇಖರ್, ಡಾ.ಹೇಮ, ಅರವಳಿಕೆ ತಜ್ಞರಾದ ಡಾ. ಸೌಮ್ಯ ಗೀತಾ, ಡಾ.ಶ್ವೇತಾ, ನರ್ಸ್‌ಗಳಾದ ಸುಮಲತಾ, ತ್ರಿಪುರಾಂಭ, ಅನಿತಾ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net