

ರೋಗಿಗಳನ್ನು ಉತ್ತಮ ರೀತಿ ಆರೈಕೆ ಮಾಡುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ಡೈರೆಕ್ಟರ್ ಡಾ.ಕೆ.ಆರ್.ದಾಕ್ಷಾಯಿಣಿ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೆ.ಕೆ.ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 2024-25ನೇ ಸಾಲಿನ ಸರ್ಕಾರಿ ಬಿ.ಎಸ್ಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಶುಶ್ರೂಷ ಮಹಾವಿದ್ಯಾಲಯದಲ್ಲಿ ಉತ್ತಮವಾದ ಕ್ಲಿನಿಕಲ್ ಮೆಟಿರಿಯಲ್ ಸೌಲಭ್ಯವಿದೆ. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ಒದಗಿಸಲಾಗಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಶುಶ್ರೂಷ ಸೇವೆಗೆ ಸಿದ್ಧರಾಗುವಂತೆ ಕರೆ ನೀಡಿದರು.
ಇದೇ ವೇಳೆ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಪ್ರಥಮ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಹಾಯಕ ಪ್ರಾಧ್ಯಾಪಕಿ ಎನ್.ಜ್ಯೋತಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಾಂಶುಪಾಲ ಡಾ.ನಂದಪ್ರಕಾಶ್, ಎಂಎಂಸಿ ಆ್ಯಂಡ್ ಆರ್‌ಐ ಪ್ರಾಂಶುಪಾಲ ಡಾ.ಕೆ.ಸತೀಶ್, ಮುಖ್ಯ ಆಡಳಿತಾಧಿಕಾರಿ ಸಿ.ಆರ್.ಕಲ್ಪಶ್ರೀ, ಆರ್ಥಿಕ ಸಲಹೆಗಾರ ಎನ್.ನೂತನಶ್ರೀ, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಎಚ್.ಪಿ.ಶೋಭಾ, ಚೆಲುವಾಂಬ ಆಸ್ಪತ್ರೆಯ ಡಾ.ಆರ್.ಸುಧಾ, ಪಿಕೆಟಿಬಿ ಆಸ್ಪತ್ರೆಯ ಡಾ.ಸಿ.ಪ್ರಶಾಂತ್, ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ನಯಾಜ್ ಪಾಷ, ಚೆಲುವಾಂಬ ಆಸ್ಪತ್ರೆಯ ಡಾ.ಶಿವರಾಮಕೃಷ್ಣ, ಸರ್ಕಾರಿ ಶೂಶ್ರೂಷ ಶಾಲೆ ಪ್ರಾಂಶುಪಾಲರಾದ ಯು.ಪಿ.ಚಂದ್ರಕಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.