

ಸರಗೂರು: ಹತ್ತಿ ಬೆಳೆಯಲ್ಲಿ ಗುಲಾಬಿ ಬಣ್ಣದ ಕಾಯಿಕೊರಕ ಬಂದರೆ ಯಾವ ಕ್ರಮ ವಹಿಸಬೇಕು ಎಂಬುದರ ಕುರಿತು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ರೈತರಿಗೆ ತರಬೇತಿ ನೀಡಲಾಯಿತು.
ಕಬಿನಿ ಆರ್ಗ್ಯಾನಿಕ್ಸ್ ಫಾರ್ಮರ್ಸ್ ಪ್ರೊಡ್ಯೂಸರ್, ಎಲ್ಡಿಸಿ ಕಂಪನಿ, ಬೋಲ್ಗಾರ್ಡ್ ಹಾಗೂ ವಾದ್ಮನಿ ಸಂಯೋಜಿತ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಗುಣಮಟ್ಟದ ಹತ್ತಿ ಬೆಳೆಯುವ ಕುರಿತು ನುರಿತ ತಜ್ಞರು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಲ್ಡಿಸಿ ಕಂಪನಿ ವ್ಯವಸ್ಥಾಪಕ ಗಂಗಾಧರ್ ಮಾತನಾಡಿ, ರೈತರು ಸರ್ಕಾರದಿಂದ ಮತ್ತು ಕಂಪನಿಯಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಬೆಳೆಗೆ ರೋಗ ಬರುವ ಮುನ್ನವೇ ನಿಯಂತ್ರಣಕ್ಕೆ ಕ್ರಮವಹಿಸಬೇಕು. ರೈತರು ಉತ್ತಮ ಉಳುವರಿ ಪಡೆಯುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮೋಹಕ ಬಲೆಯನ್ನು ಹೊಲದಲ್ಲಿ ಯಾವ ರೀತಿ ಉಪಯೋಗಿಸಬೇಕು ಎಂಬುದರ ಬಗ್ಗೆ ಅಧಿಕಾರಿ ಗಿರೀಶ್ ಮಾಹಿತಿ ನೀಡಿದರು. ರೈತರಿಗೆ ಎಲ್‌ಡಿಸಿ ಕಂಪನಿ ವತಿಯಿಂದ ಒಂದು 1,600ಕ್ಕೂ ಹೆಚ್ಚು ಮೋಹಕ ಬಲೆಗಳನ್ನು ಉಚಿತವಾಗಿ ವಿತರಿಸಲಾಯಿತು.
ವಾಧ್ವನಿ ಸಂಯೋಜಿತ ಸಂಸ್ಥೆ ಪ್ರತಿನಿಧಿ ಮಂಜುನಾಥ್, ಕಬಿನಿ ಆರ್ಗ್ಯಾನಿಕ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಮುಖ್ಯಸ್ಥ ವಿಲಿಯಂ ಡಿಸೋಜ, ಕೃಷಿ ಇಲಾಖೆ ಅಧಿಕಾರಿ ಮಹೇಶ್, ಬೋಲ ಗಾರ್ಡ್ ಸಂಸ್ಥೆ ಪ್ರತಿನಿಧಿ ಶಂಭಣ್ಣ, ಹಾದಿಮನಿ ಗ್ರಾಮಸ್ಥರಾದ ರಾಮು, ಲಿಂಗಪ್ಪ, ಮಹೇಶ್, ಶಿವಕುಮಾರ, ರವಿಕುಮಾರ್, ಎಂ.ಎಸ್.ದೇವರಾಜ್, ನಾಗರಾಜು, ಶಿವಮಲ್ಲಪ್ಪ, ವೆಂಕಟೇಶ್ ಇತರರಿದ್ದರು.