ರೈಲ್ವೆ ಟ್ರ್ಯಾಕ್ ಗೆ ತಲೆ ಇಟ್ಟು ಯುವಕ ಆತ್ಮಹತ್ಯೆ

Published on

ಮಂಗಳೂರು: ನಗರದ ಪಚ್ಚನಾಡಿ ಬಳಿ ರೈಲ್ವೆ ಟ್ರ್ಯಾಕ್ ಗೆ ತಲೆ ಇಟ್ಟು ಸ್ಥಳೀಯ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಪಚ್ಚನಾಡಿ ಶಿವಾಜಿನಗರ ನಿವಾಸಿ ಗಂಗಾಧರ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ತಲೆ ಹಾಗು ದೇಹ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ಬೆಳಗ್ಗಿನ ಜಾವ ಘಟನೆ ನಡೆದಿರಬೇಕೆಂದು ರೈಲ್ವೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ವೆನ್ಲಾಕ್ ಗೆ ಸಾಗಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net