ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಮಂಗಳೂರು ಭೇಟಿ ಪ್ರಯಾಣಿಕರ ಸುರಕ್ಷತೆಗೆ ಸಿಸಿ ಕ್ಯಾಮರಾ ಕಡ್ಡಾಯ ಸೂಚನೆ

mng-june10-ADG1
Published on

ಮಂಗಳೂರು: ರೈಲ್ವೆ ಎಡಿಜಿಪಿ ಭಾಸ್ಕರ ರಾವ್ ಗುರುವಾರ ಮಂಗಳೂರು ರೈಲ್ವೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಪ್ರಯಾಣಿಕರ ದಟ್ಟಣೆ ಇರುವಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಸೂಚನೆ ನೀಡಿದರು. ರೈಲ್ವೆ ಪೊಲೀಸರಿಗೆ ಹೆಚ್ಚಿನ ತಾಂತ್ರಿಕ ಉಪಕರಣಗಳನ್ನು ನೀಡಲಾಗುವುದು ಎಂದು ಎಡಿಜಿಪಿ ತಿಳಿಸಿದ್ದಾರೆ.

ಕೊಂಕಣ ರೈಲ್ವೆಯ ಜೋಕಟ್ಟೆಯಿಂದ ಕಾರವಾರದ ತನಕದ ವ್ಯಾಪ್ತಿ ರೈಲ್ವೆ ಪೊಲೀಸರಿಗೆ ಬರುವುದಿಲ್ಲ. ಆದರೂ ಕರ್ನಾಟಕದ ಮೂಲಕ ರೈಲ್ವೆ ಮಾರ್ಗ ಹಾದು ಹೋಗುವುದರಿಂದ ಪ್ರಯಾಣಿಕರಿಗೆ ರಕ್ಷಣೆ ನೀಡುವುದು ಸ್ಥಳೀಯ ಪೊಲೀಸರ ಕರ್ತವ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net