

ರಾಯಬಾಗ: ಪ್ರತಿಯೊಬ್ಬ ರೈತರು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಣ್ಣಿಗೆ ಅವಶ್ಯವಿರುವ ಪೋಷಕಾಂಶ ಒದಗಿಸಲು ಸಾಧ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ ಹೇಳಿದರು.
ಪಟ್ಟಣದ ಕೃಷ್ಣಗೋದಾವರಿ ಸಹಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿಎಂ ಪ್ರಣಾಮ ರೈತರ ಸಂಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ತನ್ನ -ಫಲವತ್ತತೆ ಕಳೆದುಕೊಳ್ಳುತ್ತದೆ. ಭೂಮಿ -ಫಲವತ್ತತೆ ಹೆಚ್ಚಿಸಲು ಸಾವಯವ ಗೊಬ್ಬರ ಬಳಸಬೇಕು ಎಂದರು.
ಕೃಷ್ಣಗೋದಾವರಿ ಸಹಕಾರಿಯ ಕೈಲಾಸ ಪುರಂವಾರ ಮಾತನಾಡಿ, ರೈತರು ಗೊಬ್ಬರ ಹಾಕುವ ಮುಂಚಿತವಾಗಿ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಇದರಿಂದ ಭೂಮಿ -ಫಲವತ್ತತೆ ತಕ್ಕಂತೆ ಬೆಳೆ ಬೆಳೆಯಲು ಅನುಕೂಲ ಎಂದರು.
ಅನುಷ ಪಾಟೀಲ, ನಂದು ದೇಸಾಯಿ, ಸಾಯಿನಾಥ ಮೊರಲವಾರ, ಮಹೇಶ ಮುಗಳಖೋಡ, ಶ್ರೀರಿಷ ಶಹಾಪೂರೆ, ರಾಮಾ ಬಸ್ತವಾಡೆ, ಶ್ರೀಶೈಲ ಸಾಬಾನೆ, ಭೀಮಾ ಬೆಟಗೇರಿ ಇತರರು ಇದ್ದರು.