ರೈತರಿಗೆ 1.5 ಕೋಟಿ ರೂ. ಪರಿಹಾರ

8KDR2 check
ಕಡೂರು ತಾಲೂಕು ತಿಮ್ಲಾಪುರ ಗ್ರಾಮದ ರೈತರಿಗೆ ಸೋಲಾರ್ ಕಂಪನಿಯಿಂದ ಶಾಸಕ ಕೆ.ಎಸ್.ಆನಂದ್ ಪರಿಹಾರದ ಡಿಡಿಯನ್ನು ಹಸ್ತಾಂತರಿಸಿದರು. ಭಂಡಾರಿ ಶ್ರೀನಿವಾಸ್, ದಿನೇಶ್ ತಿಮ್ಲಾಪುರ, ಹರೀಶ್, ಬಸವರಾಜ್, ಮರುಳಪ್ಪ, ಮಹೇಶ್ವರಪ್ಪ, ನವೀನ್ ಇತರರಿದ್ದರು.
Published on

ಕಡೂರು: ತಿಮ್ಲಾಪುರದಲ್ಲಿ ಭೂಮಿ ಕಳೆದುಕೊಂಡು ಸಂಕಷ್ಟದಲ್ಲಿ 14 ರೈತರಿಗೆ ನಾನು ಸೇರಿದಂತೆ ಶಾಸಕ ಕೆ.ಎಸ್.ಆನಂದ್ ಅವರ ನೆರವಿನಿಂದ 1.5 ಕೋಟಿ ರೂ. ಪರಿಹಾರ ದೊರಕಿದೆ ಎಂದು ಕಾಂಗ್ರೆಸ್ ಮುಖಂಡ ತಿಮ್ಲಾಪುರ ದಿನೇಶ್ ತಿಳಿಸಿದರು.

ಖಾಸಗಿ ಸೋಲಾರ್ ಕಂಪನಿಯವರು ರೈತರ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದರ ವಿರುದ್ಧ ತಿಮ್ಲಾಪುರ ಗ್ರಾಮದ ರೈತರು ಎರಡು ವರ್ಷಗಳ ಹಿಂದಿನಿಂದಲೂ ಪ್ರತಿಭಟನೆ ಮಾಡಿದ್ದರು. ಆದರೆ ಸೋಲಾರ್ ಕಂಪನಿಯವರು ಅಂದು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅವರ ಪರವಾಗಿರುವಂತೆ ರೈತರ ವಿರುದ್ಧ ದೂರು ದಾಖಲಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿಸಿದ ಪ್ರಕರಣದಿಂದ ರೈತರು ಅಸಮಾಧಾನಗೊಂಡಿದ್ದರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಖಾಸಗಿ ಸೋಲಾರ್ ಕಂಪನಿಯ ವಿರುದ್ಧ ಭೂಮಿ ಕಳೆದುಕೊಂಡ ರೈತರ ಪರವಾಗಿ ಧ್ವನಿ ಎತ್ತಿದ ಶಾಸಕ ಕೆ.ಎಸ್.ಆನಂದ್, ನಾನು ಮತ್ತು ಅನೇಕರು ರೈತರ ಪರವಾಗಿ ಹೋರಾಟ ಮಾಡಿದ್ದರ ಪರಿಣಾಮ ಸೋಲಾರ್ ಕಂಪನಿ ಮಾಲೀಕರು ಪರಿಹಾರ ನೀಡಿದೆ. 66 ಗುಂಟೆ ಭೂಮಿ ಕಳೆದುಕೊಂಡ 14 ರೈತರಿಗೆ ಸುಮಾರು 1.5 ಕೋಟಿ ರೂ. ಪರಿಹಾರವಾಗಿ ಕೊಡಿಸಿದ್ದಾರೆ. ಇದಕ್ಕೆ ರೈತರ ಪರವಾಗಿ ಶಾಸಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.ಪಂಚನಹಳ್ಳಿ ರವಿ, ಕುಮಾರ್, ಸೋಮಶೇಖರ್, ಎಸ್.ಮಾದಾಪುರ ಚಿದಾನಂದ, ಸುನೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net