ರೈತರ ಸಮಸ್ಯೆಗಳಿಗೆ ಹೋರಾಟವೇ ಪರಿಹಾರ

Published on

ರೈತ, ಸಮಸ್ಯೆ, ಹೋರಾಟ, ಪರಿಹಾರ, Farmer, Problem, Struggle, Solution, ದೇವದುರ್ಗ: ಸರ್ಕಾರಗಳ ಅವೈಜ್ಞಾನಿಕ ನೀತಿಗಳು, ಕಾರ್ಪೋರೇಟ್ ಕಂಪನಿ ಹಾಗೂ ಬಂಡವಾಳಶಾಹಿಗಳ ದಬ್ಬಾಳಿಕೆಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆಗಳಿಗೆ ಸಂಘಟನೆ ಹಾಗೂ ಹೋರಾಟವೇ ಪರಿಹಾರವಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ ಹೇಳಿದರು. ಇದನ್ನೂ ಓದಿ: ತಾಲೂಕಿನ ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರೈತರ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಪ್ರಾಂತ ರೈತ ಸಂಘದ ಸದಸ್ಯರು ಹೋರಾಟಕ್ಕೆ ಮುಂದಾಗಬೇಕಿದೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದರೂ ವಿದ್ಯುತ್, ಎಪಿಎಂಸಿ ಖಾಸಗೀಕರಣಗೊಳಿಸುವ ಮೂಲಕ ಪರೋಕ್ಷವಾಗಿ ಮೂರು ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದೆ. ಸಮಗ್ರ ನೀರಾವರಿ ಜಾರಿಗೆ ರೈತರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಅಧ್ಯಯನ ಶಿಬಿರ ಯಶಸ್ವಿಯಾಗಿ ನಡೆದಿದ್ದು, ಶಿಬಿರದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು ಎಂದರು. ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, ಪ್ರಾಂತ ರೈತ ಸಂಘ, ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಾಣಕ್ಕೆ ಪ್ರಮುಖ ಪಾತ್ರವಹಿಸಿದೆ. ಮುಂದಿನ ದಿನಗಳಲ್ಲಿ ರೈತರ ಜ್ವಲಂತ ಸಮಸ್ಯೆಗಳು, ಬೆಂಬಲ ಬೆಲೆ, ಉಪಕಾಲುವೆ ನವೀಕರಣ ಕಾಮಗಾರಿಗಳ ಬಗ್ಗೆ ಹೋರಾಟ ನಡೆಸಲು ಶಿಬಿರ ಪ್ರೇರಣೆಯಾಗಿದೆ ಎಂದರು. ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ನರಸಣ್ಣ ನಾಯಕ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗಿರಿಯಪ್ಪ ಪೂಜಾರಿ, ವಕೀಲ ಹನುಮಂತ್ರಾಯ ಚಿಂತಲಕುಂಟಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಪ್ರಮುಖರಾದ ನವೀನಕುಮಾರ, ವೆಂಕಟಾಚಲಯ್ಯ, ಎನ್.ಪ್ರಭಾ, ಚನ್ನಪ್ಪ ಆನೆಗೊಂದಿ, ಶಬ್ಬೀರ್ ಜಾಲಹಳ್ಳಿ, ಎಚ್.ಶಿವರಾಜ, ಹನುಮಂತ ಮನ್ನಾಪುರಿ ಇದ್ದರು. 3-ಡಿವಿಡಿ-5 ಹೂವಿನಹೆಡಗಿಯಲ್ಲಿ ಆಯೋಜಿಸಿದ್ದ ರೈತರ ಅಧ್ಯಯನ ಶಿಬಿರ ಸಮಾರೋಪ ಸಮಾರಂಭದಲ್ಲಿ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ ಮಾತನಾಡಿದರು. ರಾಜ್ಯ ಜಂಟಿ ಕಾರ್ಯದರ್ಶಿ ನರಸಣ್ಣ ನಾಯಕ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗಿರಿಯಪ್ಪ ಪೂಜಾರಿ, ವಕೀಲ ಹನುಮಂತ್ರಾಯ ಚಿಂತಲಕುಂಟಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net