ರೈತರ ಅಭಿವೃದ್ಧಿಗೆ ಪಿಎಲ್ಡಿ ಬ್ಯಾಂಕ್ ಸಹಕಾರಿಯಾಗಿದೆ/ಮಾರ್ಚ್ ಅಂತ್ಯದೊಳಗೆ ಸಾಲ ಮರುಪಾವತಿಸಿ ಸರ್ಕಾರದ ಸೌಲಭ್ಯ ಪಡೆಯ ಬೇಕು / ಯಲವಾರ ಸೊಣ್ಣೇಗೌಡ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರೈತರು ತಾವು ಪಡೆದ ಸಾಲವನ್ನು ಮಾರ್ಚ್ ೩೧ ರ ಒಳಗೆ ಮರುಪಾವತಿ ಮಾಡುವುದರಿಂದ ಇತರೆ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಜೊತೆಗೆ ಬ್ಯಾಂಕಿನ ಅಭಿವೃದ್ದಿಗು ಸಹಕಾರಿಯಾಗಲಿದೆ. ಸರ್ಕಾರದಿಂದಲೂ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ತಿಳಿಸಿದರು.

ನಗರದ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕಛೇರಿಯಲ್ಲಿ ಭಾನುವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಯ ಪಿಎಲ್ಡಿ ಬ್ಯಾಂಕ್ ಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯ ಸಭೆಯಲ್ಲಿ ಮಾತನಾಡಿ ಪಿಎಲ್ಡಿ ಬ್ಯಾಂಕ್ ಅಡಿಯಲ್ಲಿ ಸಾಲ ಸೌಲಭ್ಯ ಪಡೆದಿರುವ ಅರ್ಹ ರೈತರು ಮಾರ್ಚ್ ೩೧ ರೊಳಗೆ ಮರುಪಾವತಿ ಮಾಡಬೇಕು. ಈ ಹಿಂದೆ ಮಾರ್ಚ್ ತಿಂಗಳು ಮುಗಿದರು ಜೂನ್ ತಿಂಗಳ ತನಕ ಅವಕಾಶವಿತ್ತು. ಈ ವರ್ಷದಿಂದ ಅಂತಹ ಅವಕಾಶವಿಲ್ಲ. ಕೂಡಲೇ ಮರುಪಾವತಿ ಮಾಡಬೇಕು ಇಲ್ಲದೇ ಹೋದರೆ ಶೇ. ೧೨ ರ ಬಡ್ಡಿ ಹೆಚ್ವುವರಿಯಾಗುತ್ತದೆ ಎಂದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಯಲ್ಲಿ ರೈತರಿಗೆ ಆಸರೆಯಾಗಿ ಪಿಎಲ್ಡಿ ಬ್ಯಾಂಕ್ ಗಳು ಉಳಿದಿವೆ. ಆರ್ಥಿಕವಾಗಿ ಬದಲಾವಣೆಗೂ ಕಾರಣವಾಗಿದೆ. ಈ ತಿಂಗಳಲ್ಲಿ ಮರುಪಾವತಿ ಮಾಡಿದರೆ ಶೇ. ೩ ಬಡ್ಡಿ ಕಟ್ಟಬೇಕಾಗುತ್ತದೆ. ಇಲ್ಲದೇ ಹೋದರೆ ಶೇ. ೧೨ ಬಡ್ಡಿಯಾಗುತ್ತದೆ. ರೈತರು ಮರುಪಾವತಿ ಮಾಡಿ ಬೇರೆಯವರಿಗೂ ಸಾಲ ಸೌಲಭ್ಯಗಳನ್ನು ನೀಡಲು ಸಹಕರಿಸಬೇಕು ಎಂದರು.

ಬ್ಯಾAಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೇವಲ ಸಂಬಳ ಪಡೆಯಲು ಅಷ್ಟೇ ಸೀಮಿತವಾಗಬಾರದು. ರೈತರಿಗೆ ಮಾಹಿತಿ ನೀಡಬೇಕು. ಜೊತೆಗೆ ಅಭಾಗದ ರಾಜಕಾರಣಿಗಳ ಸಲಹೆ ಸೂಚನೆಗಳನ್ನು ಪಡೆದು ಬ್ಯಾಂಕ್ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ರೈತರ ಮನೆ ಬಾಗಿಲಿಗೆ ಹೋಗಿ ಮನವರಿಕೆ ಮಾಡಿ ಸಾಲ ಮರುಪಾವತಿಗೆ ಒತ್ತಾಯಿಸಬೇಕು. ರೈತರಿಂದ ಸಾಲ ವಸೂಲಿ ಮತ್ತು ಸಾಲು ನೀಡುವುದು ಸಹ ಅಧಿಕಾರಿಗಳ ಜವಾಬ್ದಾರಿ ಕೆಲಸವೆಂದು ಭಾವಿಸಬೇಕು. ಉಳಿದ ೩೦ ದಿನದಲ್ಲಿ ಕನಿಷ್ಠ ಶೇ. ೯೦ ರಷ್ಠು ವಸೂಲಿ ಮಾಡಲು ಕ್ರಮ ವಹಿಸಬೇಕು ಎಂದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವತಿಯಿಂದ ರಾಜ್ಯದಲ್ಲಿ ಶೇ ೩ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತದೆ. ಸಣ್ಣ ಹಿಡುವಳಿದಾರರು, ರೈತರ ಪಾಲಿಗೆ ಈ ಬ್ಯಾಂಕ್ ಆಶ್ರಯದಾತ. ರೈತರು ಬ್ಯಾಂಕ್ ನೀಡುವ ಸಾಲ ಸದುಪಯೋಗ ಪಡಿಸಿಕೊಂಡು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಿ ಬ್ಯಾಂಕ್ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಕೋಲಾರ ಜಿಲ್ಲಾ ವ್ಯವಸ್ಥಾಪಕ ಸುರೇಶ್ ಬಾಬು, ಚಿಕ್ಕಬಳ್ಳಾಪುರ ವ್ಯವಸ್ಥಾಪಕ ಬೈರೇಗೌಡ, ಸೇರಿದಂತೆ ಎರಡು ಜಿಲ್ಲೆಯ ಪಿಎಲ್ಡಿ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಇದ್ದರು.

ಚಿತ್ರ ೦೨ ಕೆ.ಎಲ್.ಆರ್. ೦೧ ನಗರದ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕಛೇರಿಯಲ್ಲಿ ಭಾನುವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಯ ಪಿಎಲ್ಡಿ ಬ್ಯಾಂಕ್ ಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯ ಸಭೆಯಲ್ಲಿ ಭಾಗವಹಿಸಿರುವ ಬ್ಯಾಂಕ್‌ನ ವ್ಯವಸ್ಥಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net