

ಬೆಂಗಳೂರು:
ಭೂ ಸುಧಾರಣಾ ಕಾಯಿದೆ ತಿದ್ದುಪಡಿ, ಎಪಿಎಂಸಿ ಕಾಯಿದೆ ತಿದ್ದುಪಡಿ, ವಿದ್ಯುಚ್ಛಕ್ತಿ ಖಾಸಗಿಕರಣ ವಿರೋಧಿಸಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಶುಕ್ರವಾರ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ‘ಉಪವಾಸ ಸತ್ಯಾಗ್ರಹ’ ನಡೆಸಿದರು. ಇವರಿಗೆ ಸಾಥ್ ನೀಡಿದ ಕನ್ನಡ ಸಂಘಟನೆ ‘ಕರ ನಿರಾಕರಣ ಸತ್ಯಾಗ್ರಹ’ ನಡೆಸಿ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಕಿಡಿ ಕಾರಿದರು.
ಬೆಳಗ್ಗೆ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ರೈತ ಹಾಗೂ ಕನ್ನಡ ಸಂಘಟನೆ ಕಾರ್ಯಕರ್ತರು ರೈತ, ಕಾರ್ಮಿಕ ವಿರೋಧಿ ಸುಗ್ರಿಜಾಜ್ಞೆಗಳ ವಿರುದ್ಧ ೋಷಣೆ ಕೂಗುತ್ತಾ ಸರ್ಕಾರದ ನಡೆಯನ್ನು ಖಂಡಿಸಿದರು.
ಪ್ರಜಾಪ್ರಭುತ್ವ ನಾಶವಾಗುತ್ತಿದೆ: ಈ ಕುರಿತು ಸುದ್ದಿಗಾರ ಜತೆ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ ಸುಗ್ರೀವಾಜ್ಞೆಯನ್ನು ೋಷಿಸಿದ್ದು ಖಂಡನೀಯ. ಕಾರ್ಪೊರೇಟ್ ಕಂಪನಿಗಳ ಪರ ಇಷ್ಟೊಂದು ಮೊಂಡು ಹಠಕ್ಕೆ ಬಿದ್ದಿರುವ ಉದ್ದೇಶವೇನು ಎಂಬುದು ಗೊತ್ತಾಗುತ್ತಿಲ್ಲ. ಪ್ರಜಾಪ್ರಭುತ್ವ ನಾಶಮಾಡಿ ಅದರ ಆಶಯಗಳನ್ನು ಹಾಳು ಮಾಡುತ್ತಿದ್ದೀರಿ. ಎರಡನೇ ಬಾರಿ ಸುಗ್ರಿವಾಜ್ಞೆ ತರಲು ಇದೇನು ದೇಶದ ಅಭದ್ರತೆಯ ವಿಷಯವೇ ? ಎಂದು ಸರ್ಕಾರವನ್ನು ಪ್ರಶ್ನಿಸಿದರು. ನಾಡಿನ ಹಿತಕ್ಕೊಸ್ಕರ ಕೆಲಸ ಮಾಡಬೇಕು. ರೈತ ವಿರೋಧಿ ನೀತಿಯನ್ನು ಪ್ರಶ್ನಿಸಿ ರಾಜ್ಯದ ಎಲ್ಲ ಹಳ್ಳಿಗಳಲ್ಲೂ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.