ವಿಜಯವಾಣಿ ಸುದ್ದಿಜಾಲ ಕೋಲಾರ
ಸರ್ಕಾರ ಮತ್ತು ಅರಣ್ಯ ಇಲಾಖೆ ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ. ರೈತರ ಪರವಾಗಿ ನನ್ನ ಹೋರಾಟ ಮುಂದುವರೆಯುತ್ತದೆ. ನನ್ನನ್ನು ಜೈಲಿಗೆ ಹಾಕಲಿ ಅಥವಾ ಗುಂಡಿಕ್ಕಿ ಕೊಲ್ಲಲ್ಲಿ ರೈತರ ಪರವಾಗಿ ನಿಲ್ಲುತ್ತೇನೆಂದು ಸಂಸದ ಮುನಿಸ್ವಾಮಿ ಘೋಷಿಸಿದರು.
ಅರಣ್ಯ ಇಲಾಖೆಯವರು ಒತ್ತುವರಿ ನೆಪದಲ್ಲಿ ಪಾಳ್ಯ ಗ್ರಾಮದ ರೈತ ಮಹಿಳೆಯರ ಜಮೀನಿನಲ್ಲಿ ಬೆಳೆ ನಾಶ ಪಡಿಸಿದ್ದಲ್ಲದೆ ಅವರ ವಿರುದ್ಧವೇ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿರುವುದರಿಂದ ಮನ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ದಾಖಲಾಗಿರುವ ಮಹಿಳೆಯರಾದ ಶಾಮಲ ಗೋಪಾಲರೆಡ್ಡಿ ಮತ್ತು ಲಕ್ಷಿö್ಮÃದೇವಮ್ಮ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ೨೦ ದಿನಗಳಿಂದ ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆಯವರು ರೈತರ ಜಮೀನುಗಳ ಒತ್ತುವರಿಯನ್ನು ತೆರವು ಮಾಡುವ ನೆಪದಲ್ಲಿ ಕೋಟ್ಯಾಂತರ ಬೆಲೆ ಬಾಳುವ ತರಕಾರಿ ಬೆಳೆಗಳನ್ನು ಹಾಗೂ ೪೦-೫೦ ವರ್ಷಗಳ ಮಾವಿನ ಮರಗಳನ್ನು ನಾಶ ಮಾಡುತ್ತಿದ್ದಾರೆ. ಸರ್ಕಾರ ಇವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಶನಿವಾರ ಪಾಳ್ಯ ಗ್ರಾಮದಲ್ಲಿ ರೈತರ ಮಹಿಳೆಯರ ಮತ್ತು ರೈತರ ಜಮೀನನ್ನು ಒತ್ತುವರಿ ನೆಪದಲ್ಲಿ ಬೆಳೆ ನಾಶಪಡಿಸುತ್ತಿದ್ದರು. ಅದನ್ನು ತಡೆಯಲು ನಾನು ಮತ್ತು ಪಕ್ಷದ ಮುಖಂಡರು ಹಾಗೂ ರೈತರು ಸ್ಥಳಕ್ಕೆ ಹೋದಾಗ ಅಲ್ಲಿ ಅರಣ್ಯ ಇಲಾಖೆಯವರು ಇರಲಿಲ್ಲ. ಜೆಸಿಬಿಗಳ ಘರ್ಜನೆ ಹೆಚ್ಚಾಗಿತ್ತು. ಬೆಳೆ ನಾಶ ಪಡಿಸುವುದನ್ನು ತಡೆದಿದ್ದಕ್ಕೆ ಅರಣ್ಯ ಇಲಾಖೆಯವರು ನೀಡಿದ ದೂರಿನ ಮೇರೆಗೆ ಪೋಲಿಸರು ರಾತ್ರೋರಾತ್ರಿ ರೈತರ ಮನೆಗಳ ಮೇಲೆ ದಾಳಿ ಮಾಡಿ, ಭಯೋತ್ಪಾದಕರಂತೆ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ರೈತರ ಹೆಸರಿನಲ್ಲಿ ಅಧಿಕಾರಿಕ್ಕೆ ಬಂದ ಕಾಂಗ್ರೇಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಅರಣ್ಯ ಭೂಮಿ ಒತ್ತುವರಿ ನೆಪದಲ್ಲಿ ರೈತರನ್ನು ಸರ್ಕಾರ ಕೊಲೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆಯೇ ೪೦-೫೦ ವರ್ಷಗಳ ಹಿಂದೆಯೇ ರೈತರಿಗೆ ಆರ್.ಟಿ.ಸಿ. ಮತ್ತು ಮ್ಯೂಟೇಶನ್ ನೀಡಿದೆ. ರೈತರು ಭೂಮಿಯನ್ನು ಸಾಗುವಳಿ ಮಾಡಿಕೊಂಡು ಮಾವಿನ ಮರಗಳು, ತರಕಾರಿ ಬೆಳೆಗಳು ಬೆಳೆದಿದ್ದಾರೆ. ರೈತರಿಗೆ ಯಾವುದೇ ಮಾಹಿತಿ ನೀಡದೆ ಸದರಿ ಜಮೀನು ನಮಗೆ ಸೇರಿದ್ದು ಎಂದು ಅರಣ್ಯ ಇಲಾಖೆಯವರು ತೆರವು ಮುಂದಾಗಿದ್ದಾರೆ. ಕಾಲು ಹಿಡಿದುಕೊಂಡು ಕೇಳಿಕೊಂಡರು ಅವಕಾಶ ನೀಡದೆ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ. ರೈತರ ಗೋಳು ಇವರಿಗೆ ತಟ್ಟದೇ ಇರುವುದಿಲ್ಲ. ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಕಾಫಿಗಳನ್ನು ನೀಡಿದರು ಕೇಳದೆ ತೆರವು ಮಾಡುತ್ತಿದ್ದಾರೆ ಎಂದರು.
ಅರಣ್ಯ ಇಲಾಖೆಯವರು ನೂರು ಕೇಸು ಹಾಕಿದರೂ ನಾನು ಹೆದರುವುದಿಲ್ಲ. ರಾಜ್ಯ ಮಟ್ಟದಲ್ಲಿ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ರಾತ್ರಿ ವೇಳೆ ಜೆಸಿಬಿ ಡ್ರೆöÊವರುಗಳಿಗೆ ಕುಡಿಸಿ ಅರಣ್ಯ ಇಲಾಖೆಯವರು ರೈತರ ಮೇಲೆ ದಬ್ಬಾಳಿಕೆ ಮಾಡಿಸುತ್ತಿದ್ದಾರೆ. ತೆರವು ಕಾರ್ಯಾಚರಣೆ ನಿಲ್ಲುವ ತನಕ ನನ್ನ ಹೋರಾಟ ಮುಂದುವರೆಯುತ್ತದೆ. ನಮ್ಮ ಪಕ್ಷ ರೈತರ ಪರವಾಗಿ ನಿಲ್ಲುತ್ತದೆ. ಯಾರೋ ಸೋತರೂ ಯಾರೋ ಗೆದ್ದರು ಎಂದು ಈ ತಾಲ್ಲೂಕಿನಲ್ಲಿ ರೈತರನ್ನು ಅರಣ್ಯ ಇಲಾಖೆಯ ಮೂಲಕ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಹೆಚ್ಚರಿಕೆ ನೀಡಿದರು.
ವಿವಾದಾತ್ಮಕ ಹೇಳಿಕೆ
ಅರಣ್ಯ ಇಲಾಖೆಯವರು ಎಕರೆಗೆ ಐದು ಲಕ್ಷ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸರ್ಕಾರ ಆತ್ಮ ಹತ್ಯೆ ಮಾಡಿಕೊಂಡರೆ ೨-೩ ಲಕ್ಷ ಎಂದು ಹೇಳುತ್ತಿದೆ. ಅರಣ್ಯ ಸಚಿವರು ಮತ್ತು ಕಂದಾಯ ಸಚಿವರು ಆತ್ಮಹತ್ಯೆ ಮಾಡಿಕೊಳ್ಳಲಿ ನಾನೇ ಐದು ಲಕ್ಷ ಅಥವಾ ೫೦ ಲಕ್ಷ ಕೊಡುತ್ತೇನೆಂದು ಸಂಸದ ಮುನಿಸ್ವಾಮಿ ಇದೇ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಬಾಕ್ಸ್
ಅರಣ್ಯ ಇಲಾಖೆಯವರು ದಿನಕ್ಕೆ ಜೆಸಿಬಿಗಳಿಗೆ ೭೦೦-೮೦೦ ರೂಗಳು ಕೊಡುತ್ತಾರೆಂದು ಕುಡಿದ ಅಮಲಿನಲ್ಲಿ ಜೆಸಿಬಿ ಡ್ರೆöÊವರುಗಳು ಮತ್ತು ಮಾಲೀಕರು ರೈತರ ಬೆಳೆಯನ್ನು ನಾಶಪಡಿಸಿರುವುದಲ್ಲದೆ ಅವರ ಮೇಲೆ ಜೆಸಿಬಿ ಹತ್ತಿಸಲು ಹೋಗುತ್ತಿರಲ್ಲ? ನಿಮ್ಮ ಅಕ್ಕ ತಂಗಿಯರ ಮೇಲೆ ಇದೇ ರೀತಿ ಮಾಡುತ್ತೀರಾ? ಎಂದು ಜೆ.ಸಿ.ಬಿ. ಡ್ರೆöÊವರುಗಳನ್ನು ಮತ್ತು ಮಾಲೀಕರನ್ನು ಸಂಸದ ಮುನಿಸ್ವಾಮಿ ತರಾಟೆಗೆ ತೆಗೆದುಕೊಂಡರು.
ಬಾಕ್ಸ್
ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ರೈತರ ಆತ್ಮಹತ್ಯೆ ಮಾಡಿಕೊಂಡಾಗ ಕೀಳಾಗಿ ಮಾತನಾಡುತ್ತಾರೆ. ಶೇ.೪೦-೫೦ ಸರ್ಕಾರ ಇದಾಗಿದೆ. ಈಗಾಗಲೇ ಒತ್ತುವರಿ ನೆಪದಲ್ಲಿ ನಾಶ ಪಡಿಸಿರುವ ಬೆಳೆಗಳಿಗೆ ಪರಿಹಾರ ನೀಡುವ ತನಕ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.
ಕೋಟ್
ಸಂಸದ ಮುನಿಸ್ವಾಮಿ ೨೦ ದಿನಗಳ ನಂತರ ಜ್ಞಾನೋದಯವಾಗಿದೆಯೇ ? ೨೦ ದಿನಗಳಿಂದಲೂ ಶ್ರೀನಿವಾಸಪುರದಲ್ಲಿ ಅರಣ್ಯ ಒತ್ತುವರಿ ಭೂಮಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದರಿಂದ ರೈತರು ನೋಂದಿದ್ದಾರೆ. ಸರ್ಕಾರ ಮಟ್ಟದಲ್ಲಿ ತೆರವು ಕಾರ್ಯಾಚರಣೆ ನಿಲ್ಲಿಸದೆ ರೌಡಿಸಂ ರೀತಿಯಲ್ಲಿ ಅರಣ್ಯ ಇಲಾಖೆಯ ಮೇಲೆ ಅಮಾಯಕ ರೈತರಿಂದ ದಬ್ಬಾಳಿಕೆ ಮಾಡಿಸಿ ಜೆಸಿಬಿಗಳನ್ನು ಜಖಂಗೊಳಿಸಿ ಶಾಂತಿಯುತವಾಗಿದ್ದ ಶ್ರೀನಿವಾಸಪುರಕ್ಕೆ ಬೆಂಕಿ ಹಚ್ಚುವ ಕೆಲಸ ಸಂಸದ ಮುನಿಸ್ವಾಮಿ ಮಾಡಿದ್ದಾರೆ. ಇದರಿಂದ ಅಮಾಯಕ ರೈತರು ಕೇಸು ಹಾಕಿಸಿಕೊಳ್ಳುವಂತೆ ಆಗಿದೆ. ಒಬ್ಬ ರೈತ ೧೦-೨೦ ಎಕೆರೆ ಮಾಡಿಕೊಂಡವರೆಲ್ಲ ರೈತರಾಗುತ್ತಾರೆಯೇ ಅರಣ್ಯ ಇಲಾಖೆಯವರು ಕಾನೂನು ಪ್ರಕಾರವೇ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ. ದಾಖಲೆಗಳನ್ನು ಪರಿಶೀಲಿಸುವ ಕೆಲಸ ಸಂಸದರು ಮಾಡಲಿ, ಇದು ರಿಜರ್ವ್ ಫಾರಿಸ್ಟರ್ ಇದು ಕೇಂದ್ರಕ್ಕೆ ಸೇರಿದ್ದು, ಕೇಂದ್ರ ಸರ್ಕಾರದಿಂದ ತೆರವು ಕಾರ್ಯಾಚರಣೆಯನ್ನು ಸಂಸದರು ಏಕೆ ನಿಲ್ಲಿಸಲಿಲ್ಲ.
-ಶ್ರೀನಿವಾಸಗೌಡ, ರೈತ ಸಂಘದ ಮುಖಂಡರು.
ಚಿತ್ರ ೧೦. ಕೆ.ಎಲ್.ಆರ್. ೦೨ : ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ರೈತ ಮಹಿಳೆಯರಿಬ್ಬರ ಯೋಗಕ್ಷೇಮವನ್ನು ವಿಚಾರಿಸುತ್ತಿರುವ ಸಂಸದ ಮುನಿಸ್ವಾಮಿ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ
ಚಿತ್ರ ೧೦. ಕೆ.ಎಲ್.ಆರ್. ೦೨ಎ : ಸಂಸದ ಮುನಿಸ್ವಾಮಿ ಮಾಧ್ಯಮಗಳೊಂದಿಗೆ ಶ್ರೀನಿವಾಸಪುರದಲ್ಲಿ ಮಾತನಾಡುತ್ತಿರುವುದು.