

ನಮ್ಮ ನಾಯಿ ಕಳೆದಿದೆ, ನೀವೇನಾದರೂ ನೋಡಿದ್ದೀರಾ ಎಂದು ವಿಚಾರಿಸುವ ನೆಪದಲ್ಲಿ ಇಬ್ಬರು ಖದೀಮರು, ರೈತ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನ ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲವಾಲ ಹೋಬಳಿ, ಕಲ್ಲೂರು ನಾಗನಹಳ್ಳಿ ಗ್ರಾಮದ ಕುಳ್ಳೇಗೌಡರ ಪತ್ನಿ ಕುಮಾರಿ(೪೭) ಅವರ ಸುಮಾರು ೩.೨೦ ಲಕ್ಷ ಮೌಲ್ಯದ ೩೭ ಗ್ರಾಂ ಚಿನ್ನದ ಮಾಂಗಲ್ಯ ಸರ ಖದೀಮರ ಪಾಲಾಗಿದೆ.