ರೇವತಗಾಂವದಲ್ಲಿ ಮಲಕಾರಸಿದ್ದ, ಲಗಮವ್ವದೇವಿ ಪಲ್ಲಕ್ಕಿ ಭೇಟಿ

Published on

ರೇವತಗಾಂವ, ಮಲಕಾರಸಿದ್ದ, ಲಗಮವ್ವದೇವಿ, ದೀಪಾವಳಿ, ಭಂಡಾರ, ಖಾರೀಕ್, ಬದಾಮಿ, ಶೇಂಗಾ,

ರೇವತಗಾಂವ: ದೀಪಾವಳಿ ನಿಮಿತ್ತ ಗ್ರಾಮದಲ್ಲಿ ಮಲಕಾರಸಿದ್ದ ಹಾಗೂ ಲಗಮವ್ವದೇವಿ ದೇವರುಗಳ ಭೇಟಿ ಕಾರ್ಯಕ್ರಮ ಗುರುವಾರ ಜರುಗಿತು.

ನಸುಕಿನ ಜಾವ ಮಲಕಾರಸಿದ್ದ ಹಾಗೂ ಲಗಮವ್ವದೇವಿ ದೇವರುಗಳಿಗೆ ರುದ್ರಾಭಿಷೇಕ ಪೂಜೆ ನೆರವೇರಿತು.

ನಂತರ ಭಕ್ತರಿಂದ ದೀರ್ಘದಂಡ ನಮಸ್ಕಾರ ಜರುಗಿತು. ಬೆಳಗ್ಗೆ 10 ಗಂಟೆಗೆ ಡೊಳ್ಳಿನ ಪದಗಳು ನಡೆದವು. ಮಧ್ಯಾಹ್ನ 3.30 ಗಂಟೆಗೆ ಮಲಕಾರಸಿದ್ದ ಹಾಗೂ ಲಗಮವ್ವದೇವಿ ದೇವರುಗಳ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವದೊಂದಿಗೆ ಸಂಚರಿಸಿ ರೇವಣಸಿದ್ಧೇಶ್ವರ ದೇವಾಸ್ಥಾನದ ಮುಂಭಾಗದ ಭೇಟಿ ಸ್ಥಳ ತಲುಪಿತು.

ನಂತರ ವಿವಿಧ ಕಲಾವಿದರಿಂದ ಡೊಳ್ಳಿನ ವಾಲಗ ಜರುಗಿತು. ಸಂಜೆ 4.30 ಗಂಟೆಗೆ ಭಂಡಾರ ತೂರುವುದರೊಂದಿಗೆ ಭೇಟಿ ಕಾರ್ಯ ನಡೆಯಿತು. ಭಕ್ತರು ಭಂಡಾರ, ಖಾರೀಕ್, ಬದಾಮಿ, ಶೇಂಗಾ, ಚುರುಮುರಿಗಳನ್ನು ದೇವರ ಪಲ್ಲಕ್ಕಿಗಳ ಮೇಲೆ ಎಸೆದು ನಮಿಸಿದರು.

ಮಲಕಾರಸಿದ್ದ ದೇವಸ್ಥಾನದ ಮುಂಭಾಗ ಮಾರಾಯ ಅಮೋ ಪೂಜಾರಿ ಅವರಿಂದ ನುಡಿಮುತ್ತುಗಳು ಜರುಗಿದವು.

* ಫೋಟೋ

ಆರ್‌ವಿಟಿ 31-1

ರೇವತಗಾಂವ ಗ್ರಾಮದಲ್ಲಿ ಮಲಕಾರಸಿದ್ದ- ಲಗಮವ್ವ ದೇವಿ ದೇವರುಗಳ ಪಲ್ಲಕ್ಕಿ ಭೇಟಿ ಸಂಭ್ರಮದಿಂದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net