ರೇಣುಕಸ್ವಾಮಿ ಕೊಲೆ ಮತ್ತೊಬ್ಬ ಆರೋಪಿ ರವಿ ಶರಣಾಗತಿ

Darshan Ravi
Published on

ಚಿತ್ರದುರ್ಗ: ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ರವಿ ಗುರುವಾರ ಪೊಲೀಸರಿಗೆ ಶರಣಾಗಿದ್ದಾನೆ.

ತಾಲೂಕಿನ ದಂಡಿನ ಕುರುಬರಹಟ್ಟಿ ಗ್ರಾಮದ ವಾಸಿ ಎಂಬುದಾಗಿ ತಿಳಿದುಬಂದಿದ್ದು, ಕಾರು ಚಾಲಕ ವೃತ್ತಿಯಲ್ಲಿದ್ದ ಎನ್ನಲಾಗಿದೆ.

ಈ ಕೃತ್ಯದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿತರಿದ್ದು, ಅದರಲ್ಲಿ ಜಗದೀಶ್ ಆಲಿಯಾಸ್ ಜಗ್ಗು, ಅನು, ರವಿ ಮತ್ತು ರಾಜು ಎಂಬುವವರು ತಲೆಮರೆಸಿಕೊಂಡಿದ್ದರು. ಪೊಲೀಸರು ಶೋಧ ಮುಂದುವರಿಸಿದ್ದರು.

ಚಿತ್ರದುರ್ಗದ ಡಿವೈಎಸ್‌ಪಿ ಕಚೇರಿಗೆ ರವಿ ಬಂದಿದ್ದು, ಡಿವೈಎಸ್‌ಪಿ ದಿನಕರ್ ಅವರ ಬಳಿ ಪ್ರಕರಣ ಸಂಬಂಧ ಬೆಂಗಳೂರಿನ ತನಿಖಾಧಿಕಾರಿಗಳ ಮುಂದೆ ಶರಣಾಗುವುದಾಗಿ ತಿಳಿಸಿದ್ದಾನೆ.

ಈಗಾಗಲೇ ಬಂಧಿತನಾಗಿರುವ ಕೋಳಿಬುರುಜನಹಟ್ಟಿಯ ರಾಘವೇಂದ್ರ ಆಲಿಯಾಸ್ ರಘು, ರವಿ ಬಾಡಿಗೆ ಕಾರಿನಲ್ಲೇ ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಿದ್ದರು.

ಕೊಲೆ ಪ್ರಕರಣ ಬಯಲಾಗುತ್ತಿದ್ದಂತೆ ರವಿ ಗಾಬರಿಗೊಂಡು ತಲೆಮರೆಸಿಕೊಂಡಿದ್ದ. ಭಯದ ನಡುವೆ ಪೊಲೀಸರ ಮುಂದೆ ಆರೋಪಿ ಶರಣಾಗಿದ್ದಾನೆ.

ಬಾಡಿಗೆ ಇದೆ ಎಂಬುದಾಗಿ ನನ್ನನ್ನು ನಂಬಿಸಿ ರಾಘವೇಂದ್ರ ಮತ್ತು ತಂಡದವರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು ಎಂಬ ಹೇಳಿಕೆ ನೀಡಿರುವ ಮಾಹಿತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net