ರೇಣುಕಸ್ವಾಮಿ ಕೊಲೆ ಪ್ರಕರಣ ಜಗ್ಗು, ಅನು ಬಂಧನ

Anu-Jaggu
Published on

ಚಿತ್ರದುರ್ಗ: ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಎ-6’ ಆರೋಪಿ ರೈಲ್ವೆ ನಿಲ್ದಾಣ ನಿವಾಸಿ ಜಗದೀಶ್ ಆಲಿಯಾಸ್ ಜಗ್ಗು, ಹೊಳಲ್ಕೆರೆ ರಸ್ತೆ ಸಿಹಿನೀರು ಹೊಂಡ ಬೀದಿಯ ‘ಎ-7’ ಅನಿಲ್‌ಕುಮಾರ್ ಆಲಿಯಾಸ್ ಅನು ಇಬ್ಬರೂ ಆಟೋ ಚಾಲಕ ವೃತ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳ ಬಂಧನ ಸಂಬಂಧ ಬೆಂಗಳೂರಿನ ಪೊಲೀಸರ ತನಿಖಾಧಿಕಾರಿಗಳ ತಂಡ ಜೂ. 13ರಂದು ಚಿತ್ರದುರ್ಗದ ಡಿವೈಎಸ್‌ಪಿ ದಿನಕರ್ ಅವರ ಬಳಿ ಸಹಕಾರ ಕೋರಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಚಲನವಲನ ಆಲಿಸಿ ಅರೆಸ್ಟ್‌ ಮಾಡಿದ್ದಾರೆ.

ಕಿಡ್ನಾಪ್ ದೃಶ್ಯ ಸೆರೆ: ಜೂ. 8ರಂದು ಕಿಡ್ನಾಪ್ ಮಾಡಿದ ನಂತರ ಕಾರಿನಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸಿದ ದೃಶ್ಯ ಬೆಳಗ್ಗೆ 9.55ಕ್ಕೆ ಪೆಟ್ರೋಲ್ ಬಂಕ್‌ವೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಿಡ್ನಾಪ್‌ಗೂ ಮುನ್ನ ಆರೋಪಿತರು ಆಟೋದಲ್ಲಿ ಸಂಚರಿಸಿದ್ದು, ಬಂಕ್ ಬಳಿಸಿ ನಿಲ್ಲಿಸಿದ್ದಾರೆ. ಆನಂತರ ಬೆಂಗಳೂರು ಮಾರ್ಗದ ಕಡೆ ಕಾರು ತಿರುವು ಪಡೆದಿರುವ ದೃಶ್ಯ ಸೆರೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಗುಹಿಲಾಳ್ ಟೋಲ್ ಬಳಿ ವಿಐಪಿ ಕಾರ್ಡ್ ತೋರಿಸಿ ಕಾರು ಮುಂದೆ ಸಾಗಿರುವ ದೃಶ್ಯವೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net