ರುದ್ರಾಕ್ಷಿಗಿದೆ ಕಾಯಿಲೆ ಗುಣಪಡಿಸುವ ಶಕ್ತಿ

1sor1 mahantha swamji
ವೈದ್ಯ ದಿನಾಚರಣೆ ಅಂಗವಾಗಿ ಸೊರಬ ಸರ್ಕಾರಿ ಆಸ್ಪತ್ರೆ ಉದ್ಯಾನದಲ್ಲಿ ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ರುದ್ರಾಕ್ಷಿ ಗಿಡ ನೆಟ್ಟರು. ಡಾ. ಸತೀಶ್‌ನಾಯ್ಕ, ನಾಗರಾಜ್ ಗುತ್ತಿ, ವೇಣುಗೋಪಾಲ್, ಮಹೇಶ್ ಪಾಟೀಲ್, ಶಿಲ್ಪಾ ಬೋರ್ಕರ್ ಇತರರಿದ್ದರು.
Published on

ಸೊರಬ: ಭಾರತೀಯ ಇತಿಹಾಸ ಹಾಗೂ ಆಯುರ್ವೆೇದ ಪರಂಪರೆಯಲ್ಲಿ ರುದ್ರಾಕ್ಷಿಗೆ ಅತ್ಯಂತ ಮಹತ್ವ ಮತ್ತು ಪವಿತ್ರ ಸ್ಥಾನವಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಉದ್ಯಾನದಲ್ಲಿ ಮಂಗಳವಾರ ವೈದ್ಯ ದಿನಾಚರಣೆ ಅಂಗವಾಗಿ ರುದ್ರಾಕ್ಷಿ ಗಿಡ ನೆಟ್ಟು ಮಾತನಾಡಿದ ಅವರು, ಆಯುರ್ವೆೇದ ಔಷಧ ಪರಂಪರೆಯಲ್ಲಿ ರುದ್ರಾಕ್ಷಿ ಗಿಡ ವಿಶಿಷ್ಟ ಸ್ಥಾನ ಪಡೆದಿದೆ ಎಂದರು.

ಲೋಕದ ಕಲ್ಯಾಣಕ್ಕಾಗಿ ಭಗವಂತನ ಕಣ್ಣೀರಿನ ಹನಿಯಿಂದ ರುದ್ರಾಕ್ಷಿ ಗಿಡ ಉದ್ಭವವಾಗಿದೆ ಎಂಬ ಪ್ರತೀತಿ ಇದೆ. ಜಗತ್ತಿನಲ್ಲಿ ಸ್ವಾರ್ಥ ಗುಣಗಳನ್ನು ಹೊಂದಿದವರನ್ನು ಕಾಣುತ್ತೇವೆ. ಆದರೆ ಮರ, ಗಿಡ, ತರು, ಲತೆಗಳಿಗೆ ಸ್ವಾರ್ಥ ಗುಣಗಳು ಇರುವುದಿಲ್ಲ. ಅವು ಪರೋಪಕಾರ ಗುಣಗಳನ್ನು ಹೊಂದಿರುತ್ತವೆ. ಮನುಷ್ಯನ ವಿವಿಧ ಕಾಯಿಲೆಗಳು ರುದ್ರಾಕ್ಷಿ ಧರಿಸುವುದರಿಂದ ವಾಸಿಯಾಗುತ್ತವೆ. ಮಕ್ಕಳಲ್ಲಿ ಅಧ್ಯಯನದ ಆಸಕ್ತಿ ಹೆಚ್ಚಿಸುವ ಗುಣ ಹೊಂದಿದೆ. ವೈದ್ಯರ ಸೇವೆ ದೇವರ ಕೆಲಸ. ಅವರ ದಿನಾಚರಣೆಯಂದು ರುದ್ರಾಕ್ಷಿ ಗಿಡ ನೆಟ್ಟಿರುವುದು ಸಂತಸ ತಂದಿದೆ ಎಂದರು.

ಡಾ. ಸತೀಶ್‌ನಾಯ್ಕ , ಉದ್ಯಮಿ ನಾಗರಾಜ್ ಗುತ್ತಿ, ವೇಣುಗೋಪಾಲ್, ಮಹೇಶ್ ಪಾಟೀಲ್, ಶುಶ್ರೂಷಕ ಅಧಿಕಾರಿ ಶಿಲ್ಪಾ ಬೋರ್ಕರ್, ಚನ್ನಪ್ಪ, ರವಿ, ಅಭಿಷೇಕ್, ಗುರು, ಜಿಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net