ಸೋಮವಾರಪೇಟೆ: ಸೋಮವಾರಪೇಟೆಯ ಲಯನ್ಸ್ ಕ್ಲಬ್ ಮತ್ತು ಬೆಂಗಳೂರಿನ ಯಲಹಂಕದ ಲಯನ್ಸ್ ಕ್ಲಬ್ ವತಿಯಿಂದ ಗರಗಂದೂರು ಬಿ.ಗ್ರಾಮದ ಹೊಸ ತೋಟದಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎಸ್.ಮಹೇಶ್, ಲಯನ್ಸ್ ಯಲಹಂಕ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಸಂಕುಸ್ಥಾಪನೆ ನೆರವೇರಿಸಿದರು. ಸೋಮವಾರಪೇಯ ಲಯನ್ಸ್ ಕಾರ್ಯದರ್ಶಿ ಚಾವಡಿ ಶಿವಕುಮಾರ್, ಯಲಹಂಕ ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಿತೇಂದ್ರ ಸಿಂಗ್, ಮುಖಂಡರಾದ ಚಿಟ್ಟಿಮಾಡ ರೋಹಿತ್, ನಂಗಾರು, ರಾಮಚಂದ್ರ, ಎ.ಪಿ.ಸುಬ್ಬಯ್ಯ, ರಾಜು, ಐಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಲೀಂ ಇದ್ದರು.