ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆಗೆ ಚಾಲನೆ

4RAM2
ಖಾನಪೇಠ ಶ್ರೀ ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಷೇರುದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆಗೆ ಗಣ್ಯರು ಚಾಲನೆ ನೀಡಿದರು. ಮಲ್ಲಣ್ಣ ಯಾದವಾಡ, ಮಹಾದೇವಪ್ಪ ಯಾದವಾಡ, ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಶಶಿಕಲಾ ಸೋಮಗೊಂಡ, ಶ್ರೀಮತಿ ಮುರಗೋಡ ಇತರರಿದ್ದರು.
Published on

ರಾಮದುರ್ಗ: ಪ್ರತಿ ವರ್ಷದಂತೆ ಷೇರುದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲಾಗುತ್ತಿದೆ ಎಂದು ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.

ತಾಲೂಕಿನ ಖಾನಪೇಠ ಶ್ರೀ ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅ ವರ್ಗದ ಷೇರುದಾರರಿಗೆ ಕ್ವಿಂಟಾಲ್​ ಸಕ್ಕರೆಯನ್ನು 2200 ರೂ.ಗೆ, ಡ ವರ್ಗದ ಷೇರುದಾರರಿಗೆ 50 ಕೆ.ಜಿ. ಸಕ್ಕರೆಯನ್ನು 1100 ರೂ.ಗೆ ಆ. 4ರಿಂದ 18ರ ವರೆಗೆ ವಿತರಿಸಲಾಗುವುದು. ಷೇರುದಾರರು ಷೇರ್​ ಸರ್ಟಿಫಿಕೇಟ್​ ಹಾಗೂ ಆಧಾರ್​ ಕಾರ್ಡ್​ನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.

ಮಾಜಿ ಶಾಸಕ, ನಿರ್ದೇಶಕ ಮಹಾದೇವಪ್ಪ ಯಾದವಾಡ ಮಾತನಾಡಿ, ಪ್ರತಿ ವರ್ಷ ನಾಗಪಂಚಮಿ ನಿಮಿತ್ತ ಸಕ್ಕರೆ ವಿತರಿಸಲಾಗುತ್ತಿದೆ. ಆಡಳಿತ ಮಂಡಳಿ ಷೇರುದಾರರು ಹಾಗೂ ರೈತರ ಒಳಿತಿಗೆ ಹಲವು ಕ್ರಮ ತೆಗೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಕಾರ್ಖಾನೆ ಪ್ರಗತಿಗೆ ಶ್ರಮಿಸುವುದಾಗಿ ಹೇಳಿದರು.

ಕಿಲ್ಲಾ ತೊರಗಲ್​ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ನಿರ್ದೇಶಕರಾದ ಎ.ಸಿ. ಸುರಗ, ಬಾಳಪ್ಪ ಹಂಜಿ, ಮಹಾದೇವ ಆತಾರ, ಬಿ.ಎಂ. ತುಪ್ಪದ, ಐ.ಎಸ್​. ಹರನಟ್ಟಿ, ಶಂಕರಗೌಡ ಪಾಟೀಲ, ತಿಪ್ಪನಗೌಡ ಪಾಟೀಲ, ದುಂಡಪ್ಪ ದೇವರಡ್ಡಿ, ಸುರೇಶ ಡುಳ್ಳೋಳ್ಳಿ, ಚಂದ್ರು ರಜಪೂತ, ಭೀಮಾಸಾಹೇಬ ಪಾಟೀಲ, ನೀಲಪ್ಪ ಚಿಪ್ಪಲಕಟ್ಟಿ, ಶಶಿಕಲಾ ಸೋಮಗೊಂಡ, ಶ್ರೀಮತಿ ಮುರಗೋಡ, ಶ್ರೀನಿವಾಸ ಕರದಿನ, ವೃತ್ತಿಪರ ಸಲಹೆಗಾರ ಶಂಭು ಮಾಳವಾಡ, ವ್ಯವಸ್ಥಾಪಕಿ ಶಾಹೀನ್​ ಅಖ್ತರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net