ರಾಸಾಯನಿಕ ಗೊಬ್ಬರ ಬಳಕೆಯಿಂದ ಅನಾರೋಗ್ಯ

9 nrp 2 sabhe
ಎನ್.ಆರ್.ಪುರ ರೋಟರಿ ಹಾಲ್‌ನಲ್ಲಿ ರೋಟರಿ ಕ್ಲಬ್‌ನ ವಾರದ ಸಭೆಯಲ್ಲಿ ವರುಣ ಸಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜಿ.ದಿವಾಕರ್, ಪಿ.ಕೆ.ಬಸವರಾಜ್, ಎಸ್.ಎಸ್.ಶಾಂತ್‌ಕುಮಾರ್, ಸುಂದರೇಶ್, ಲೋಕೇಶ್ ಇದ್ದರು.
Published on

ಎನ್.ಆರ್.ಪುರ: ರಾಸಾಯನಿಕ ಗೊಬ್ಬರದ ಅತಿ ಬಳಕೆಯಿಂದ ಇಂದು ಮಾರಕ ರೋಗಗಳಾದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದೇವೆ ಎಂದು ಸಾಮಾಜಿಕ ಅರಣ್ಯ ಉಪವಲಯ ಅರಣ್ಯಾಧಿಕಾರಿ ವರುಣ ಸಿ. ಶೆಟ್ಟಿ ತಿಳಿಸಿದರು.

ಅವರು ರೋಟರಿ ಹಾಲ್‌ನಲ್ಲಿ ರೋಟರಿ ಕ್ಲಬ್‌ನ ವಾರದ ಸಭೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಬಗ್ಗೆ ಉಪನ್ಯಾಸ ನೀಡಿದರು.

ಪ್ರತಿವರ್ಷ ಒಂದೊಂದು ಧ್ಯೇಯ ವಾಕ್ಯದಡಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಒಂದೊಂದು ದೇಶವು ಒಂದೊಂದು ಜವಾಬ್ದಾರಿ ತೆಗೆದುಕೊಳ್ಳುತ್ತಿದೆ. ಪರಿಸರ ಎಂದರೆ ಕೇವಲ ಗಿಡ, ಮರ ಮಾತ್ರವಲ್ಲ. ನಮ್ಮ ಸುತ್ತಮುತ್ತ ಇರುವ ಎಲ್ಲ ಜಾಗವು ಪರಿಸರವಾಗಿದೆ. ಮರುಭೂಮಿ, ಸಮುದ್ರ ಸಹ ಪರಿಸರವಾಗಿದೆ.

ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ್ ಮಾತನಾಡಿ, ನಾವು ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಮುಂದಿನ ಪೀಳಿಗೆ ಆರೋಗ್ಯವಾಗಿರುತ್ತಾರೆ. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಅದನ್ನು ಪೋಷಣೆ ಮಾಡೋಣ ಎಂದುತಿಳಿಸಿದರು. ರೋಟರಿ ಕಾರ್ಯದರ್ಶಿ ಮಧು, ಹಿರಿಯ ಸದಸ್ಯರಾದ ಎಸ್.ಎಸ್.ಶಾಂತಕುಮಾರ್,ಸುಂದರೇಶ್, ಪಿ.ಎಸ್. ವಿದ್ಯಾನಂದಕುಮಾರ್,ಲೋಕೇಶ್, ನವೀನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net