ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆ

27.. __ __ __. 001
Published on

ಪಿರಿಯಾಪಟ್ಟಣ: ಪಟ್ಟಣದ ಗ್ರೀನ್ ಕಿಡ್ಸ್ ನೃತ್ಯ ಶಾಲೆ ವಿದ್ಯಾರ್ಥಿಗಳು ಸತತ ಐದನೇ ಬಾರಿಗೆ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ಮೈಸೂರಿನ ಜೆಕೆ ಗ್ರೌಂಡ್ ಮೈದಾನದ ಆಡಿಟೋರಿಯಂನಲ್ಲಿ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪಟ್ಟಣದ ಗ್ರೀನ್ ಕಿಡ್ಸ್ ನೃತ್ಯ ಶಾಲೆಯ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ 9 ಚಿನ್ನ ಹಾಗೂ 11 ಕಂಚಿನ ಪದಕಗಳನ್ನು ಪಡೆದು ಸತತವಾಗಿ ಐದನೇ ಬಾರಿಗೆ ರಾಷ್ಟ್ರ ಮಟ್ಟದ ನೃತ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆ. 2023ರ ಫೆಬ್ರವರಿಯಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನೃತ್ಯ ಶಾಲೆಯ ನೃತ್ಯ ಸಂಯೋಜಕ ಅಂಬಾರಿ ಪರಮೇಶ್ ತಿಳಿಸಿದ್ದಾರೆ.


ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ರವಿ, ತಾಂತ್ರಿಕ ಮುಖ್ಯಸ್ಥ ವಿನೋದ್, ರಾಹುಲ್ ರಾವ್, ತೀರ್ಪುಗಾರರಾದ ವಿದ್ವಾನ್ ಶಂಕರಯ್ಯ, ಮೇಘನಾ, ರಾಹುಲ್ ಗೌಡ, ರಾಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net