ರಾಷ್ಟçಮಟ್ಟದ ಕಬ್ಬಡ್ಡಿಗೆ ಆಯ್ಕೆ/ನೌಕರರ ಸಂಘದಿAದ ಬೀಳ್ಕೊಡುಗೆ /ಕ್ರೀಡಾ ಸಾಧಕರಾಗಿ ಬನ್ನಿ, ಜಿಲ್ಲೆಗೆ ಕೀರ್ತಿ ತನ್ನಿ/ ಡಿಸಿ ಅಕ್ರಂ ಪಾಷಾ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗೆಲುವು ದಾಖಲಿಸಿ, ಜಿಲ್ಲೆಗೆ ಕೀರ್ತಿ ತನ್ನಿ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ನೌಕರ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ದೆಹಲಿಯ ತ್ಯಾಗರಾಜ ಸ್ಡೇಡಿಯಂನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಅ.೧೬ ರಿಂದ ೨೦ರವರೆಗೂ ನಡೆಯಲಿರುವ ೨೦೨೩-೨೪ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಕುಸ್ತಿ-ಕಬ್ಬಡ್ಡಿ ರಾಷ್ಟçಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ನೌಕರರಾದ ಕಲ್ಪನಾ ಎಸ್.ಲಮಾಣಿ, ಅಂಬಿಕಾ, ಅರುಣ್‌ರನ್ನು ಶುಕ್ರವಾರ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟು ಮಾತನಾಡಿದರು.

ಸರ್ಕಾರಿ ನೌಕರರಿಗೆ ಕ್ರೀಡೆಗಳಲ್ಲಿ ಭಾಗವಹಿಸುವ ಉತ್ಸಾಹ ಅಗತ್ಯವಿದೆ, ಇದರಿಂದ ಉತ್ತಮ ಆರೋಗ್ಯದ ಜತೆಗೆ ಕ್ರೀಡಾ ಸ್ಪೂರ್ತಿಯಿಂದ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಕ್ರಿಯಾಶೀಲತೆಯೂ ಬರುತ್ತದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ್ ಮಾತನಾಡಿ, ಸರ್ಕಾರಿ ನೌಕರರು ನಿತ್ಯ ಕೆಲಸದ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ಭಾಗಹಿಸಿದಲ್ಲಿ ಕ್ರಿಯಾಶೀಲತೆ ಮೂಡುತ್ತದೆ, ನಿಮಗೆ ಇಲಾಖೆ, ಸರ್ಕಾರ ವಹಿಸಿದ ಕರ್ತವ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ಮಗ್ನರಾಗಲು ಅವಕಾಶ ಲಭಿಸುತ್ತದೆ ಎಂದರು.

ರಾಷ್ಟçಮಟ್ಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುವುದು ಸುಲಭದಮಾತಲ್ಲ, ಇಂತಹ ಅವಕಾಶ ನಿಮಗೆ ಸಿಕ್ಕಿದೆ, ಇದರಲ್ಲಿ ನಿಮ್ಮ ಪರಿಶ್ರಮವೂ ಇದೆ, ಆದರೆ ಈಗ ನೀವು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನಾ ಆದಷ್ಟು ಅಭ್ಯಾಸ ನಡೆಸಿ, ಜಯ ದಾಖಲಿಸುವ ಉತ್ಸಾಹದಿಂದ ಪಾಲ್ಗೊಳ್ಳಿ ಎಂದರು.

ಅಪರ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕಿ ಕಲ್ಪನಾ ಎಸ್.ಲಮಾಣಿ, ಮಾಲೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಂಬಿಕಾ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅರುಣ್, ಶಿಕ್ಷಕ ಎಂ.ನಾಗರಾಜ್ ರಾಷ್ಟçಮಟ್ಟದ ಕಬ್ಬಡ್ಡಿಗೆ ಆಯ್ಕೆಯಾಗಿದ್ದು, ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಸಂಘಟನಾ ಕಾರ್ಯದರ್ಶಿ ರವಿ, ಶ್ರೀನಿವಾಸಲು, ಸಂಘದ ಖೋಖೋ ಕ್ರೀಡಾಪಟುಗಳಾದ ರಾಜೇಂದ್ರಕುಮಾರ್, ಪುರುಷೋತ್ತಮ್, ಸುಭಾಷ್, ವಿಜಿ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೧೩ ಕೆ.ಎಲ್.ಆರ್. ೦೫ : ರಾಷ್ಟçಮಟ್ಟದ ಸರ್ಕಾರಿ ನೌಕರರ ಕಬ್ಬಡ್ಡಿ, ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಕ್ರೀಡಾಪಟುಗಳನ್ನು ಜಿಲ್ಲಾಧಿಕಾರಿ ಅಕ್ರಂ ಪಾಷಾ, ಅಪರ ಡಿಸಿ ಡಾ.ಶಂಕರ್ ವಣಿಕ್ಯಾಳ್ ಸನ್ಮಾನಿಸಿ ಬೀಳ್ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net