ರಾಣಿ ಚನ್ನಮ್ಮ, ರಾಯಣ್ಣನ ಹೋರಾಟ ವಿಶ್ವಪ್ರಸಿದ್ಧ

sangoli rayanna
Published on

ಬೈಲಹೊಂಗಲ: ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ, ದೇಶಭಕ್ತಿಯಿಂದ ನಾಡು ವಿಶ್ವದಾದ್ಯಂತ ಹೆಸರುವಾಸಿಯಾಗಿದೆ ಎಂದು ಮೂರು ಸಾವಿರ ಶಾಖಾ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು. ಪಟ್ಟಣದ ಉಪ್ಪಿನ ಕೂಟದ ವರದಾಂಜನೇಯ ದೇವಸ್ಥಾನದ ಬಳಿ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಈಚೆಗೆ ಏರ್ಪಡಿಸಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಮಾತನಾಡಿದರು.

ಎಬಿವಿಪಿ ನಗರ ಘಟಕದ ಅಧ್ಯಕ್ಷ ಗಿರೀಶ ಹರಕುಣಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ತ್ಯಾಗ ಮಾಡಿದ ಮಹನೀಯರನ್ನು ನೆನೆದು ಅವರ ದೇಶಭಕ್ತಿಯನ್ನು ರೂಢಿಸಿಕೊಳ್ಳಲು ಯುವಕರು ಮುಂದಾಗಬೇಕೆಂದರು. ಬ್ರಿಟಿಷರ ದಾಸ್ಯದಿಂದ ದೇಶ ರಕ್ಷಣೆಗೆ ಹಲವರು ಪ್ರಾಣ ತೆತ್ತಿದ್ದಾರೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

ಡಾ.ಮಲ್ಲಿಕಾರ್ಜುನ ಮಾಳಿ ಧ್ವಜಾರೋಹಣ ನೆರವೇರಿಸಿದರು. ಪ್ರಮೋದಕುಮಾರ ವಕ್ಕುಂದಮಠ, ಶಿವಾನಂದ ಬಡ್ಡಿಮನಿ, ರಾಜು ಬಡಿಗೇರ, ಅಶೋಕ ಸವದತ್ತಿ, ಬಸವರಾಜ ಶಿಂತ್ರಿ, ದಯಾನಂದ ಪರಾಳಶೆಟ್ಟರ, ಉಮೇಶ ಹಿರೇಮಠ, ವಿವೇಕಾನಂದ ಪೂಜಾರ, ಮಹಾಂತೇಶ ಹೊಸೂರ, ಮಲ್ಲಿಕಾರ್ಜುನ ಏಣಗಿಮಠ, ದಯಾನಂದ ಗೆಜ್ಜಿ, ಉಮೇಶ ಖಾದ್ರೊಳ್ಳಿ, ಬಸವರಾಜ ಹೂಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net