ರಾಜ್ಯೋತ್ಸವಕ್ಕೆ ಕೋಲಾರ ಸಜ್ಜು / ಪ್ರಮುಖ ಬೀದಿಗಳ ವಿದ್ಯುತ್ ಕಂಬಗಳಿಗೆ ಕಟ್ಟಿರುವ ಬೃಹತ್ ಕನ್ನಡ ಧ್ವಜಗಳು / ಆನೆಯ ಮೇಲೆ ಕೋಲಾರಮ್ಮ ದೇವಿಯ ಮೆರವಣಿಗೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಇತಿಹಾಸ ಪ್ರಸಿದ್ಧ ೨ನೇ ದಸರಾ ಎಂದೇ ಖ್ಯಾತಿ ಹೊಂದಿರುವ ಕೋಲಾರ. ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಡಳಿತದೊಂದಿಗೆ ಭುವನೇಶ್ವರಿ ಕನ್ನಡ ಸಂಘ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳಿAದ ರಾಜ್ಯೋತ್ಸವ ಆಚರಣೆ ಮಾಡಲು ಕೋಲಾರ ನಗರದ ವಿವಿಧ ಪ್ರಮುಖ ರಸ್ತೆಗಳ ವಿದ್ಯುತ್ ಕಂಬಗಳಿಗೆ ಬೃಹತ್ ಕನ್ನಡ ಧ್ವಜಗಳನ್ನು ಕಟ್ಟಲಾಗುತ್ತಿದೆ.

ರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ ನಗರದ ಕ್ಲಾಕ್ ಟವರ್ ವೃತ್ತದಿಂದ ಡ್ಯೂಂಲೈಟ್ ವೃತ್ತ, ಬಸ್‌ಸ್ಟಾಂಡ್ ವೃತ್ತ, ಬಂಗಾರಪೇಟೆ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಕನ್ನಡ ಧ್ವಜಗಳನ್ನು ಹಾಗೂ ರಸ್ತೆಯ ಉದ್ದಕ್ಕೂ ಇರುವ ವಿದ್ಯುತ್ ಕಂಬಗಳಿಗೆ ಮೇಲಿಂದ ಕೆಳಗಡೆ ತನಕ ಕನ್ನಡ ಧ್ವಜಗಳನ್ನು ಕಟ್ಟಿ ಸಿಂಗರಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಆನೆಯನ್ನು ಕರೆಯಿಸಿ ಕೋಲಾರಮ್ಮ ದೇವಿಯ ಮೆರವಣಿಗೆಯನ್ನು ನಡೆಸಲಿದ್ದಾರೆ. ಗಾಂಧಿವನದಿAದ ಆನೆಯ ಮೇಲೆ ಪಲ್ಲಕಿ ಕುಳ್ಳರಿಸಿ ಕೋಲಾರಮ್ಮ ದೇವಿಯ ಮೆರವಣಿಗೆಯು ಸಾಗಲಿದೆ. ಮೆರವಣಿಗೆಯ ಉದ್ದಕ್ಕೂ ನಗರ ಮತ್ತು ಗ್ರಾಮೀಣ ಭಾಗದದಿಂದ ಬರುವ ಪಲ್ಲಕಿಗಳು ಡೊಳ್ಳು ಸೇರಿದಂತೆ ವಿವಿಧ ಕಲಾ ಸಂಘಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಮೆರವಣಿಗೆ ಪ್ರತಿವರ್ಷದಂತೆ ಗಾಂಧಿವನದಿAದ ಅಮ್ಮಾರಪೇಟೆ ವೃತ್ತ, ಮೆಕ್ಕೆ ವೃತ್ತದಿಂದ ಹಳೇ ಬಸ್‌ಸ್ಟಾಂಡ್ ಮಾರ್ಗವಾಗಿ ಕಾಲೇಜು ವೃತ್ತ, ಬಂಗಾರಪೇಟೆ ವೃತ್ತದ ನಂತರ ಕನಕ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ.

ಡ್ಯೂಂಲೈಟ್ ವೃತ್ತ, ಟವರ್ ಹಾಗೂ ಹೊಸ ಬಸ್‌ನಿಲ್ದಾಣದ ತನಕವೂ ಮೆರವಣಿಗೆ ಹೋಗಬೆಂಕೆAಬುದು ಕನ್ನಡಾಭಿಮಾನಿಗಳ ಒತ್ತಾಯವಾಗಿದೆ. ಆದರೆ ಜಿಲ್ಲಾಡಳಿತದೊಂದಿಗೆ ಚರ್ಚೆಯಾಗಿಲ್ಲ. ಈ ಬಾರಿ ಚರ್ಚೆ ನಡೆಸಿ ತೀರ್ಮಾಣ ತೆಗೆದುಕೊಳ್ಳಬೇಕೆಂಬುದು ಕನ್ನಡಪರ ಸಂಘಟನೆಗಳ ಮುಖಂಡರ ಅಭಿಪ್ರಾಯವಾಗಿದೆ.

ಕೋಟ್

ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿ ರಾಜ್ಯೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ವರ್ಷ ವಿಶೇಷವಾಗಿ ಎಲ್ಲಾ ಪ್ರಮುಖ ರಸ್ತೆಗಳ ಮಧ್ಯ ಭಾಗದಲ್ಲಿರುವ ವಿದ್ಯುತ್ ಕಂಬಗಳಿಗೆ ಕನ್ನಡ ಧ್ವಜಗಳನ್ನು ಕಟ್ಟುವ ಕೆಲಸ ಮುಂದುವರೆದಿದೆ. ಪ್ರಮುಖ ವೃತ್ತಗಳಲ್ಲಿ ದೊಡ್ಡ ದೊಡ್ಡ ಕನ್ನಡ ಧ್ವಜಗಳನ್ನು ಕಟ್ಟಲಾಗುತ್ತಿದೆ. ಮೆರವಣಿಗೆಗೆ ಆನೆ ತರಿಸಲಾಗುವುದು. ರಾಜ್ಯೋತ್ಸವ ದಿನದಿಂದ ೫ ದಿನಗಳ ಕಾಲ ಕನ್ನಡ ಚಲನಚಿತ್ರ ಗಾಯಕರಿಂದ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ನಗರ ಹಾಗೂ ಗ್ರಾಮೀಣ ಭಾಗದ ಕನ್ನಡಪರ ಸಂಘಟನೆಗಳಿAದ ಹೆಚ್ಚಿನ ಸಂಖ್ಯೆಗಳಲ್ಲಿ ಪಲ್ಲಕ್ಕಿಗಳನ್ನು ಮೆರವಣಿಗೆಯಲ್ಲಿ ಭಾಗವಹಿಸಲು ಮನವಿ.

-ತ್ಯಾಗರಾಜ್ ಭುವನೇಶ್ವರಿ ಕನ್ನಡಪರ ಸಂಘಟನೆಯ ಅಧ್ಯಕ್ಷ

ಚಿತ್ರ ೨೭ ಕೆ.ಎಲ್.ಆರ್. ೦೨ : ತ್ಯಾಗರಾಜ್ ಭುವನೇಶ್ವರಿ ಕನ್ನಡಪರ ಸಂಘಟನೆಯ ಅಧ್ಯಕ್ಷ ರವರ ಭಾವಚಿತ್ರ

ಚಿತ್ರ ೨೭ ಕೆ.ಎಲ್.ಆರ್. ೦೨ : ನಗರದ ಎಸ್.ಎನ್.ಆರ್.ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ಕನ್ನಡ ಧ್ವಜಗಳನ್ನು ಕಟ್ಟಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net