ರಾಜ್ಯಮಟ್ಟದ ಸಿಲಂಬಮ್ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ಸ್ಪರ್ಧಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡರು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಪದವೀ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಕೋಲಾರ ಜಿಲ್ಲೆ ಮತ್ತು ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಪದವೀ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಸಿದ್ದ ರಾಜ್ಯಮಟ್ಟದ ಸಿಲಂಬಮ್ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ಸ್ಪರ್ಧಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದುಕೊಂಡರು.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚೊಕ್ಕಹಳ್ಳಿ ಪದವೀ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಿಲಂಬಮ್ ದೊಣ್ಣೆ ಮತ್ತು ಕೋಲು ವರಸೆ ಸ್ಪರ್ದೆಗೆ ರಾಜ್ಯದ ೮ ಜಿಲ್ಲೆಗಳಾದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಧಾರವಾಡ, ಮೈಸೂರು, ಬೀದರ್, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಯ ಬಾಲಕರು ಹಾಗೂ ಬಾಲಕಿಯರು ತಲಾ ೮ ಮಂದಿಯAತೆ ೧೨೦ ಮಂದಿ ಸ್ಪರ್ಧಾಳುಗಳಾಗಿ ಭಾಗವಹಿಸಿದ್ದರು.

ತೀವ್ರ ಸೆಣಸಾಟ, ಹಣಾಹಣಿ, ಅತ್ಯುತ್ಸಾಹ, ಚಾಕಚಕ್ಯತೆಯಲ್ಲಿ ನಡೆದ ಈ ದೊಣ್ಣೆ ವರಸೆಯಲ್ಲಿ ಅತಿಹೆಚ್ಚು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯ ಬಾಲಕರು ಹಾಗೂ ಬಾಲಕಿಯರ ಎರಡೂ ವಿಭಾಗವು ಪ್ರತ್ಯೇಕವಾಗಿ ಸಮಗ್ರ ಪ್ರಶಸ್ತಿಗಳನ್ನು ತಮ್ಮ ಮುಡಿಲಿಗೇರಿಸಿಕೊಂಡವು.

ತೀವ್ರ ಪ್ರತಿಸ್ಪರ್ಧೆ ಒಡ್ಡಿ ೨ನೇ ಸ್ಥಾನ ಪಡೆದ ಬಾಲಕರ ವಿಭಾಗದಲ್ಲಿ ಧಾರವಾಡ ಹಾಗೂ ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆಗಳು ರನ್ನರ್ ಆಫ್ ಪ್ರಶಸ್ತಿಗಳನ್ನು ಪಡೆದವು, ಈ ನಾಲ್ಕು ತಂಡಗಳಿಗೆ ಟ್ರೋಪಿಗಳು, ಪದಕಗಳು ಹಾಗೂ ಪ್ರಶಸ್ತಿ ಪತ್ರಗಳನ್ನು ಸಮಾರೋಪ ಸಮಾರಂಭದಲ್ಲಿ ವಿತರಿಸಲಾಯಿತು.

ಪದವೀ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಶೋಕ್‌ಕುಮಾರ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು, ಖಜಾಂಚಿ ನಾರಾಯಣಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ರತ್ನಪ್ಪ, ಚಿನ್ಮಯ ಪದವೀ ಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಸಿ.ಮಂಜುನಾಥ್ ಮತ್ತಿರರು ಭಾಗವಹಿಸಿದ್ದರು.

ಚಿತ್ರ ೧೬ ಕೆ.ಎಲ್.ಆರ್. ೦೫ : ಚೊಕ್ಕಹಳ್ಳಿ ಪದವೀ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಿಲಂಬಮ್ ದೊಣ್ಣೆ ಮತ್ತು ಕೋಲು ವರಸೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಿದ ಡಿಡಿಪಿಐ ಅಶೋಕ್‌ಕುಮಾರ್ ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಾಲಕೃಷ್ಣ ಮತ್ತಿರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net