ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯದಲ್ಲಿ ಕಾಂಗ್ರೇಸ್ ಸೋತರೆ ಸಿದ್ಧರಾಮಯ್ಯ ರಾಜೀನಾಮೆ ಕೊಡುತ್ತಾರೆಯೇ? ಜೆಡಿಎಸ್ ಪಕ್ಷ ಒಂದು ಸ್ಥಾನ ಗೆಲ್ಲಲ್ಲ ಅಂತಿದ್ದಾರಲ್ಲ ಕಾಂಗ್ರೇಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಜಿ.ಟಿ.ದೇವೇಗೌಡ ಸಿದ್ಧರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಏನಾಗುತ್ತದೆಯೋ ಗೊತ್ತಿಲ್ಲ. ಬಹುಮತ ಸರ್ಕಾರದ ಮುಗಿದ ನಂತರ ಮತ್ತೆ ಅಧಿಕಾರಿ ಕಳೆದುಕೊಂಡಿರುವ ಉದಾರಣೆ ಇದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಗಟ್ಟಿಯಾಗಿದೆ. ಮುಂದೆಯೂ ಹೀಗೆ ಇರುತ್ತೇವೆಂದರು.
೧೯೮೩ರಲ್ಲಿ ರಾಮಕೃಷ್ಣ ಹೆಗ್ಗಡೆ ಯವರ ಸರ್ಕಾರ ಇರುವಾಗಲೇ ಲೋಕಸಭೆ ಚುನಾವಣೆ ಸೋತರು. ಸೋಲಿನ ಹಿನ್ನೆಲೆಯಲ್ಲಿ ೧೯೮೪ ರಲ್ಲಿ ರಾಮಕೃಷ್ಣ ಹೆಗ್ಗಡೆಯವರು ರಾಜೀನಾಮೆ ನೀಡಿದರು. ಈ ಚುನಾವಣೆಯಲ್ಲಿ ಕಾಂಗ್ರೇಸ್ ಸೋತರೆ ಸಿದ್ಧರಾಮಯ್ಯನವರು ರಾಮಕೃಷ್ಣ ಹೆಗ್ಗಡೆಯವರಂತೆ ನೈತಿಕತೆಯನ್ನು ಉಳಿಸಿಕೊಳ್ಳುತ್ತಾರೆಯೇ?
೨೦೧೪ರಲ್ಲಿ ಕಾಂಗ್ರೇಸ್ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳದೇ ಹೋಗಿದ್ದರೆ ಅಂದೇ ಸಿ.ಎಂ.ಸಿದ್ಧರಾಮಯ್ಯನವರನ್ನು ಕೆಳಗಿಳಿಸುತ್ತಿದ್ದರು. ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಹೋದರೆ ಸಿದ್ಧರಾಮಯ್ಯನವರನ್ನು ಕೆಳಗಿಳಿಸಲಾಗುವುದೆಂದು ಹೈಕಮ್ಯಾಂಡ್ ಹೇಳಿದೆ. ರಾಜ್ಯದಲ್ಲಿ ೨೮ ಸ್ಥಾನಗಳನ್ನು ಮೈತ್ರಿಯಿಂದ ಗೆಲ್ಲೇ ಗೆಲ್ಲುತ್ತೇವೆ. ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಗೆದ್ದೇ ಗೆಲ್ಲುತ್ತಾರೆ ಎಂದರು.
ಚಿತ್ರ ೦೪ ಕೆ.ಎಲ್.ಆರ್. ೦೨ : ಜಿ.ಟಿ.ದೇವೇಗೌಡ ರವರ ಭಾವಚಿತ್ರ