ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ರಾಜ್ಯದ ಗಡಿ ಜಿಲ್ಲೆಗಳಾದ ಕೋಲಾರ, ತುಮಕೂರು, ವಿಜಯಪುರ, ಕಲ್ಬುರ್ಗಿ, ಚಾಮರಾಜನಗರ ಮುಂತಾದ ಗಡಿ ಜಿಲ್ಲೆಗಳು ಸೇರಿದಂತೆ ರಾಜ್ಯಾಂತ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಈ ವರ್ಷದಲ್ಲಿ ೬೨೩ ನಕಲಿ ವೈದ್ಯರನ್ನು ಪತ್ತೆ ಹಚ್ಚಿದ್ದು, ಇದರಿಂದ ರಾಜ್ಯದಲ್ಲಿ ನಕಲಿ ವೈದ್ಯರಿದ್ದಾರೆ ಎಂಬುದು ಬಹಿರಂಗವಾಗಿದೆ.
ರಾಜ್ಯದಲ್ಲಿ ನಕಲಿ ವೈದ್ಯರನ್ನು ಪತ್ತೆ ಹಚ್ಚುವಲ್ಲಿ ಕೋಲಾರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಈ ಜಿಲ್ಲೆಯಲ್ಲಿಯೇ ಹೆಚ್ಚು ನಕಲಿ ವೈದ್ಯರು ಇರುವುದಾಗಿ ಆರೋಗ್ಯ ಇಲಾಖೆಯಿಂದ ಖಾತರಿಯಾಗಿದೆ. ೨೦೨೩ ರಿಂದ ೨೦೨೪ರ ಸೆಪ್ಟೆಂಬರ್ ತನಕ ಕೋಲಾರ ಜಿಲ್ಲೆಯಲ್ಲಿ ೧೧೫ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಆರೋಗ್ಯ ಇಲಾಖೆಯವರು ನಕಲಿ ಕ್ಲೀನಿಕ್‌ಗಳಿಗೆ ಬೀಗ ಜಡಿದಿದ್ದಾರೆ.
ಇನ್ನು ಜಿಲ್ಲೆಯಲ್ಲಿ ೬೫ ರಿಂದ ೭೫ ನಕಲಿ ಕ್ಲೀನಿಕ್‌ಗಳು ಇವೆ. ಆರೋಗ್ಯ ಅಧಿಕಾರಿಗಳಿಗೆ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ಕ್ಲೀನಿಕ್‌ಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ೦೨ ತಿಂಗಳಿಗೊಮ್ಮೆ ಸಕ್ಷಮ ಪ್ರಾಧಿಕಾರಿಗಳ ಸಭೆ ನಡೆಸುವ ಮೂಲಕ ಜಿಲ್ಲೆಯಲ್ಲಿ ೧೧೫ ಕ್ಲೀನಿಕ್‌ಗಳಿಗೆ ಬೀಗ ಜಡಿದು ನಕಲಿ ವೈದ್ಯರನ್ನು ಪತ್ತೆ ಹಚ್ಚುವಲ್ಲಿ ಸಾಧ್ಯವಾಯಿತು ಎನ್ನುತ್ತಾರೆ ಅಧಿಕಾರಿ ವರ್ಗ.
ರಾಜ್ಯದಲ್ಲಿ ಆರೋಗ್ಯ ಇಲಾಖೆ ನಕಲಿ ವೈದ್ಯರನ್ನು ಪತ್ತೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ತುಮಕೂರಿನಲ್ಲಿ ೮೪, ಕಲ್ಬುರ್ಗಿಯಲ್ಲಿ ೬೪, ವಿಜಯನಗರದಲ್ಲಿ ೮೧, ಉಡುಪಿಯಲ್ಲಿ ೦೩, ದಕ್ಷಿಣ ಕನ್ನಡದಲ್ಲಿ ೧೭ ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಪತ್ತೆ ಹಚ್ಚಿರುವ ಸಂಖ್ಯೆ ಕಡಿಮೆಯಾಗಿದೆ. ಆದರೂ ನಕಲಿ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ಆಗಾಗ ಭ್ರೂಣಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿರುವಾಗಲೇ ಆರೋಗ್ಯ ಇಲಾಖೆ ಕೂಡ ಆಗಾಗ ದಾಳಿ ನಡೆಸಿ ನಕಲಿ ವೈದ್ಯರ ಪತ್ತೆಗೆ ಸಂಬAಧಿಸಿದ ನಕಲಿ ಕ್ಲೀನಿಕ್ ಲ್ಯಾಬ್‌ಗಳಿಗೆ ಬೀಗ ಜಡಿಯಲಾಗಿದೆ. ರಾಜ್ಯಾಂದ್ಯAತ ೨೦೦೦ಕ್ಕೂ ಅಧಿಕ ನಕಲಿ ವೈದ್ಯರ ಮತ್ತು ಕ್ಲೀನಿಕ್ ಹಾಗೂ ಲ್ಯಾಬ್‌ಗಳಿಗೆ ಬೀಗ ಜಡಿಯಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಇದು ಕೇವಲ ೨೦೨೩ ಮತ್ತು ೨೦೨೪ನೇ ವರ್ಷದ ಅಂಕಿ ಅಂಶಗಳಾಗಿವೆ ಎಂದು ತಿಳಿದು ಬಂದಿವೆ.
೧೯೩ ಕ್ಲೀನಿಕ್‌ಗಳಿಗೆ ಬೀಗ :
ರಾಜ್ಯದಲ್ಲಿ ನೋಂದಣಿಯಾದ ವೈದ್ಯರ ಸಂಖ್ಯೆ ೩೫.೧೨೩, ಸಿಕ್ಕಿ ಬಿದ್ದಿರುವ ನಕಲಿ ವೈದ್ಯರು ೬೨೩, ನೋಟಿಸ್ ಜಾರಿ ಮಾಡಿರುವುದು ೧೬೩, ಬೀಗ ಹಾಕಿರುವ ಕ್ಲೀನಿಕ್‌ಗಳು ೧೯೩, ದಂಡ ಹಾಕಿರುವ ಪ್ರಕರಣಗಳು ೮೯, ಕಾನೂನು ಮೊರೆ ಹೋಗಿರುವ ವೈದ್ಯರು ೩೬ ಆಗಿದೆ.
ನಕಲಿ ಯಾವುದು ಅಸಲಿ ಯಾವುದು ?
ರಾಜ್ಯದಲ್ಲಿ ಅಲೋಪತಿ ವೈದ್ಯ ವೃತ್ತಿ ಮಾಡುವವರಿಗೆ ಕೆ.ಎಂ.ಸಿ. ಅಥವಾ ಕರ್ನಾಟಕ ಪ್ರೆöÊವೇಟ್ ಮೆಡಿಕಲ್ ಎಸ್ಟಾಬ್ಲಿಸ್‌ಮೆಂಟ್ ಆಕ್ಟ್ (ಕೆ.ಪಿ.ಎಂ.ಇ.ಎ) ಅಡಿಯಲ್ಲಿ ನೋಂದಣಿಯಾಗಿರುಬೇಕು ಅಥವಾ ಆಯುಷ್ ವೈದ್ಯರಾದವರು ಆಯುಷ್ ಬೋರ್ಡ್ ಅಥವಾ ಕರ್ನಾಟಕ ಆರ್ಯುವೇದ ಯುನಾನಿ ಪ್ರಾಕ್ಟೀಷನರ್ ಅಸೋಸಿಯೇಷನ್ (ಕೆ.ಎ.ಯು.ಪಿ.ಎ)ಯಲ್ಲಿ ನೋಂದಣಿಯಾಗಿರಬೇಕು. ಇದನ್ನು ಹೊರತು ವೈದ್ಯ ವೃತ್ತಿ ಮಾಡುತ್ತಿರುವವರು ನಕಲಿ ಎನ್ನುತ್ತಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು.
ನಕಲಿ ವೈದ್ಯರನ್ನು ಪತ್ತೆ ಹಚ್ಚಲು ಕೆಲವು ದಿನಗಳಿಂದ ಇಲಾಖೆ ನಾನಾ ತಂಡಗಳನ್ನು ರಚನೆ ಮಾಡಿ, ಕ್ಲೀನಿಕ್ ಲ್ಯಾಬ್‌ಗಳ ಮೆಲೆ ದಾಳಿ ನಡೆಸಿ, ಕ್ಲೀನಿಕ್‌ಗಳಲ್ಲಿ ದಾಖಲೆ ಮತ್ತು ಪ್ರಮಾಣಪತ್ರಗಳನ್ನು ಹುಡುಕಾಟ ನಡೆಸಿ, ನಕಲಿ ವೈದ್ಯರೆಂದು ಗುರ್ತಿಸಿದ್ದಾರೆ.
ನಕಲಿ ವೈದ್ಯರಿಗೆ ಶಿಕ್ಷೆ :
ಪ್ರಥಮ ಬಾರಿಗೆ ಸಿಕ್ಕಿಬಿದ್ದ ನಕಲಿ ವೈದ್ಯನಿಗೆ ೨೫ ಸಾವಿರ ರೂ.ಗಳ ದಂಡ, ೨ನೇ ಬಾರಿಗೆ ಸಿಕ್ಕಿಬಿದ್ದರೆ ೨.೫ ಲಕ್ಷ ರೂ.ಗಳು ಮತ್ತು ಒಂದು ವರ್ಷ ಜೈಲು ಶಿಕ್ಷೆ, ೩ನೇ ಬಾರಿಗೆ ಸಿಕ್ಕಿಬಿದ್ದರೆ ೫ ಲಕ್ಷ ದಂಡ ಹಾಗೂ ೩ ವರ್ಷ ಜೈಲು ಶಿಕ್ಷೆಯನ್ನು ಆರೋಗ್ಯ ಇಲಾಖೆ ನಿಗಧಿಪಡಿಸಿದೆ. ಆದರೂ ಸಹ ನಕಲಿ ವೈದ್ಯರು ಗಡಿ ಜಿಲ್ಲೆಗಳಲ್ಲಿ ಅಣಬೆಗಳಂತೆ ಕ್ಲೀನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಇಂತವರಿಗೆ ಇಲಾಖೆಯವರು ಐದಾರು ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದೆ ಕ್ಲೀನಿಕ್‌ಗಳನ್ನು ಒಂದೆಡೆಯಿAದ ಮತ್ತೊಂಡೆಗೆ ಬದಲಾವಣೆ ಮಾಡುತ್ತಿದ್ದಾರೆ ಎಂಬ ಅಂಶ ಆರೋಗ್ಯ ಇಲಾಖೆಯವರಿಂದಲೇ ಮಾಹಿತಿ ಲಭ್ಯವಾಗಿದೆ.
ಕೋಟ್
ಕೋಲಾರ ಜಿಲ್ಲೆಯಲ್ಲಿ ನಕಲಿ ವೈದ್ಯರನ್ನು ಪತ್ತೆ ಹಚ್ಚಲು ಜಿಲ್ಲಾಧಿಕಾರಿ ಅಕ್ರಂಪಾಷ ಸಹಕಾರ ನೀಡಿದ್ದಾರೆ. ಪ್ರತಿ ೦೨ ತಿಂಗಳಿಗೊಮ್ಮೆ ಸಕ್ಷಮ ಪ್ರಾಧಿಕಾರ ಸಭೆ ನಡೆಸುವ ಮೂಲಕ ನಕಲಿ ವೈದ್ಯರಿಗೆ ನೋಟಿಸ್ ನೀಡಿ, ವಿಚಾರಣೆ ಹಾಜರುಪಡಿಸಿ ಹೆಚ್ಚರಿಕೆ ಕೊಡಲಾಗಿತ್ತು. ಇದರಿಂದ ಕೆಲವರು ಜಿಲ್ಲೆಯಿಂದ ಆಸ್ಪತ್ರೆಗಳನ್ನು ಮುಚ್ಚಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ತೆರಳಿದ್ದಾರೆ. ಆದರೂ ಸಹ ೧೧೫ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಆಸ್ಪತ್ರೆಗಳಿಗೆ ಬೀಗ ಜಡಿಯಲಾಗಿದೆ. ಇನ್ನು ೪೦ ರಿಂದ ೫೦ ನಕಲಿ ವೈದ್ಯರು ಜಿಲ್ಲೆಯಲ್ಲಿ ಇರುವುದು ಗೊತ್ತಾಗಿದೆ. ಅವರಿಗೂ ನೋಟಿಸ್ ನೀಡುವ ಕೆಲಸ ಮಾಡಲಾಗುತ್ತಿದೆ.
-ಡಾ.ಚಂದನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ.
ಕೋಟ್
ಕೋಲಾರ ಜಿಲ್ಲೆಯಲ್ಲಿ ಪತ್ತೆ ಹಚ್ಚಿದಂತೆ ಆರೋಗ್ಯ ಅಧಿಕಾರಿಗಳು ರಾಜ್ಯಾದ್ಯಂತ ಗಡಿ ಜಿಲ್ಲೆಗಳಲ್ಲಿ ಪತ್ತೆ ಹಚ್ಚುವ ಕೆಲಸ ಮಾಡಿದ್ದರೆ ನಕಲಿ ವೈದ್ಯರನ್ನು ಗುರ್ತಿಸಬಹುದಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಕಲಿ ವೈದ್ಯರು ಇದ್ದಾರೆ. ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಕಾಳಜಿ ಇಲ್ಲದಂತೆ ಆಗಿದೆ. ನಕಲಿ ವೈದ್ಯರಿಂದ ಚಿಕಿತ್ಸೆ ಪಡೆಯುವವರು ಬಡವರೇ ಹೆಚ್ಚಾಗಿದ್ದಾರೆ. ಇದರಿಂದ ಮೃತಪಟ್ಟಿರುವವರ ಸಂಖ್ಯೆಯು ಇದೆ. ಆದರೆ ಬೆಳಕಿಗೆ ಬರುತ್ತಿಲ್ಲ. ಸರ್ಕಾರ ಇನ್ನಾದರೂ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಬೇಕು.
-ಚಂದ್ರಶೇಖರ್, ಚಿಂತಕರು ಹಾಗೂ ಸಮಾಜ ಸೇವಕರು.
ಚಿತ್ರ ೨೭ ಕೆ.ಎಲ್.ಆರ್. ೦೧ : ಕೋಲಾರ ಜಿಲ್ಲೆಯಲ್ಲಿ ನಕಲಿ ಕ್ಲೀನಿಕ್‌ಗಳಿಗೆ ಆರೋಗ್ಯಾಧಿಕಾರಿ ಬೀಗ ಜಡಿಯಲು ಮುಂದಾಗಿರುವುದು.
ಚಿತ್ರ ೨೭ ಕೆ.ಎಲ್.ಆರ್. ೦೧ಎ : ಡಾ.ಚಂದನ್, ಜಿಲ್ಲಾ ಕುಟುಂಬ ಕಲ್ಯಾಧಿಕಾರಿ ರವರ ಭಾವಚಿತ್ರ