ರಾಜ್ಯ ಸರ್ಕಾರದ ಸಾಧನೆ ಸಾರ್ವಜನಿಕರಿಗೆ ತಿಳಿಸಿ

20sgr2 congres
ಸಾಗರದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಬಿ.ಆರ್.ಜಯಂತ್, ಕಲಸೆ ಚಂದ್ರಪ್ಪ, ಸುರೇಶ್ ಬಾಬು, ಗಣಪತಿ ಮಂಡಗಳಲೆ. ಮಧುಮಾಲತಿ, ವೀಣಾ ನಾಯ್ಡು ಇತರರಿದ್ದರು.
Published on

ಸಾಗರ: ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ರಾಜ್ಯ ಸರ್ಕಾರದ ಎರಡು ವಷರ್ದ ಸಾಧನೆಯನ್ನು ಮನೆಮನೆಗೆ ತಲುಪಿಸಬೇಕು. ನಾವು ಮಾಡಿದ್ದನ್ನು ಹೇಳಲು ವಿಲವಾದರೆ, ಬಿಜೆಪಿಯವರು ಮಾಡದೆ ಇರುವುದನ್ನು ಹೇಳಿ ಯಶಸ್ವಿಯಾಗುತ್ತಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.

ಸಾಗರದ ಗಾಂಧಿ ಮಂದಿರದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್‌ಯಿಂದ ಏರ್ಪಡಿಸಿದ್ದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿ, ಕಾರ್ಯಕರ್ತರು ಸರ್ಕಾರದ ಸಾಧನೆಯನ್ನು ಕರಪತ್ರ, ಬೇರೆಬೇರೆ ಮಾಧ್ಯಮಗಳ ಮೂಲಕ ಊರೂರಿನಲ್ಲಿ ಪ್ರಚುರಪಡಿಸಬೇಕು ಎಂದರು.

ಬಿಜೆಪಿಯವರು ಧರ್ಮದ ಹೆಸರು ಹೇಳಿ ಸಮಾಜವನ್ನು ಒಡೆಯುತ್ತಾರೆ. ಮಾಡದೇ ಇರುವುದನ್ನು ಮಾಡಿದ್ದಾಗಿ ಬಿಂಬಿಸಿ ಗೆಲ್ಲುತ್ತಾರೆ. ಹಿಂದು ಧರ್ಮಕ್ಕೆ ಕಳಂಕ ತಂದವರು ಯಾರಾದರೂ ಇದ್ದರೆ ಅದು ಬಿಜೆಪಿಯವರು. ಸಮಾಜದಲ್ಲಿ ಒಡಕು ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.

ಎಲ್ಲ ಧರ್ಮ ಜಾತಿಯವರನ್ನು ಒಟ್ಟಾಗಿ ಕರೆದೊಯ್ಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಜ್ಯದ ಪ್ರತಿ ಕುಟುಂಬಕ್ಕೂ ಐದು ಗ್ಯಾರಂಟಿಗಳ ಪೈಕಿ ಒಂದಿಲ್ಲೊಂದು ಸೌಲಭ್ಯ ತಲುಪಿದೆ. ರಾಜ್ಯದ ಜನರ ಆರ್ಥಿಕ ಶಕ್ತಿಯನ್ನು ನಮ್ಮ ಸರ್ಕಾರ ಹೆಚ್ಚಿಸಿದೆ. ಬಿಜೆಪಿಯವರು ಸಹ ಸರ್ಕಾರದ ಉಚಿತ ಯೋಜನೆ ಪಡೆಯುತ್ತಿದ್ದಾರೆ. ಆದರೂ ಕಾಂಗ್ರೆಸ್ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ದೇಶಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಜಾಕೀರ್, ಎಲ್.ಚಂದ್ರಪ್ಪ, ಹಮೀದ್, ರವಿಕುಮಾರ್, ಪ್ರಮುಖರಾದ ಕೆ.ಸಿದ್ದಪ್ಪ, ಸೋಮಶೇಖರ ಲ್ಯಾವಿಗೆರೆ, ವೀಣಾ ನಾಯ್ಡು, ವಿಲ್ಸನ್ ಗೋನ್ಸಾಲ್ವಿಸ್, ಪ್ರೇಮ್ ಸಿಂಗ್, ಗಣಾಧೀಶ್, ನಾರಾಯಣ ಅರಮನೆಕೇರಿ, ಅನ್ವರ್ ಭಾಷಾ, ಯಶವಂತ ಪಣಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net