ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ

CTD 26 RITARA PRATIBATANE
Published on

ಚಿತ್ರದುರ್ಗ: ಭೂ ಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ಹೋಬಳಿ ದೇವನಹಳ್ಳಿಯಲ್ಲಿ ಶಾಂತಿಯುತವಾಗಿ ಮುಷ್ಕರ ನಡೆಸುತ್ತಿದ್ದ ರೈತರ ಮೇಲೆ ನಡೆದ ಪೋಲಿಸ್ ದೌರ್ಜನ್ಯವನ್ನು ಖಂಡಿಸಿ ಸಂಯುಕ್ತ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪೊಲೀಸ್ ಬಲ ಬಳಸಿ ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ನಡೆಸಿದೆ. ಮಹಿಳೆಯರು, ವೃದ್ಧರೆನ್ನದೇ ಹೋ ರಾಟಗಾರರನ್ನು ಎಳೆದಾಡಿ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಲಾಭ ಮಾಡಿ ಕೊ ಡಲು ಸರ್ಕಾರದ ಮುಂದಾಗಿದೆ. ಆ ಮೂಲಕ ಅಸಂಖ್ಯಾತ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ದೇವನಹಳ್ಳಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು, ಬಂಧಿಸಿರುವ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಹೋರಾಟಗಾರ ನ್ನು ಹೀನಾಯವಾಗಿ ನಡೆಸಿಕೊಂಡಿರುವ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹಂಪಯ್ಯನಮಾಳಿಗೆ ಧನಂಜಯ, ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್, ಬಸ್ತಿಹಳ್ಳಿ ಸುರೇಶ್‌ಬಾಬು, ಕಬ್ಬಿಗೆರೆ ನಾಗರಾಜ್, ಟಿ.ಷಫಿವುಲ್ಲಾ, ಪುರುಷೋತ್ತಮ, ಕೆ.ಸಿ.ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಂ.ಸಿದ್ದಪ್ಪ, ಪ್ರೊ.ಜೆ.ಯಾದವರೆಡ್ಡಿ, ಎಚ್.ಸಿ.ಮಲ್ಲಿಕಾರ್ಜುನ್, ಸಿ.ನಾಗರಾಜ್, ಕಾಂತರಾಜ್, ಲಕ್ಷ್ಮೀಕಾಂತ್, ನಾಗರಾಜ್ ಮತ್ತಿತರ ರೈತ ಮುಖಂಡರು, ಸಮಿತಿ ಪ್ರಮುಖರು ಇದ್ದರು.

ರಸ್ತೆಗೆ ತ್ಯಾಜ್ಯ ಸುರಿದು ಹಾಳುಗೆಡವದಿರಿ

ಮನೆ ಕಸವನ್ನು ರಸ್ತೆಗೆ ಸುರಿದು ಪರಿಸರ ಹಾಳು ಮಾಡುತ್ತಿರುವುದನ್ನು ಖಂಡಿಸಿ ಕರುನಾಡ ವಿಜಯ ಸೇನೆ ಕಾರ‌್ಯಕರ್ತರು ಚಿತ್ರದುರ್ಗದ ಚಂದ್ರವಳ್ಳಿ ಕ್ರಾಸ್ ಬಳಿ ಗುರುವಾರ ಪ್ರತಿಭಟಿಸಿದರು.

ನಗರಸಭೆ ವಾಹನಗಳು ನಿತ್ಯ ಮನೆ ಬಾಗಿಲಿಗೆ ತೆರಳಿದರೂ ಕೆಲವರು ತ್ಯಾಜ್ಯವನ್ನು ತಂದು ರಸ್ತೆಗೆ ಸುರಿಯುತ್ತಿದ್ದಾರೆ. ಇಂತಹವರಿಗೆ ದಂಡ ವಿಧಿಸಬೇಕು ಅಥವಾ ಅಂಥವರ ವಿರುದ್ಧ ದೂರು ನೀಡಬೇಕೆಂದು ನಗರಸಭೆ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿ ಪ್ರತಿಭಟನಾಕಾರರು ನಗರಸಭೆ ಆರೋಗ್ಯ ನಿರೀಕ್ಷಕಿ ನಿರ್ಮಲಾ ಅವರಿಗೆ ಮನವಿ ಸಲ್ಲಿಸಿದರು.

ಐತಿಹಾಸಿಕ ಚಿತ್ರದುರ್ಗ ಕೋಟೆ ಪ್ರವಾಸಿ ತಾಣಕ್ಕೆ ಹೆಸರುವಾಸಿಯಾಗಿರುವಂತೆ, ಚಂದ್ರವಳ್ಳಿ, ಆಡುಮಲ್ಲೇಶ್ವರ, ಜೋಗಿಮಟ್ಟಿ ಗಿರಿಧಾ ಮ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಂತಹ ನಗರವನ್ನು ಸ್ವಚ್ಛವಾಗಿಡುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ. ಜಿಲ್ಲಾಡಳಿತ, ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡ ಕಟ್ಟೆಚ್ಚರ ವಹಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತರುವಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಚಂದ್ರವಳ್ಳಿ ಕ್ರಾಸ್‌ನಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕೆಂದು ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕು ಮಾರ್ ಆಗ್ರಹಿಸಿದರು.

ಗೋಪಿನಾಥ್, ಮುಜಾಹಿದ್, ಶಶಿಧರ, ನಾಗೇಶ್, ವಿಜಯ ಬಾಬು, ನಿಸಾರ್‌ಅಹಮದ್, ಹರೀಶ್ ಇತರರು ಪ್ರತಿಭಟನೆಯಲ್ಲಿ ಇದ್ದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಪ್ರತಿಭಟನೆ

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಲಂಚ ಕೊಡದೆ ವಸತಿ ಸೌಕರ್ಯ ಸೇರಿ ಬಡವರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಪಿಸಿ ತಾಲೂಕು ಬಿಜೆಪಿ ಮಂಡಲ ಪದಾಧಿಕಾರಿಗಳು ಗುರುವಾರ ಚಳ್ಳಕೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ , ತಾಲೂಕು ಕಚೇರಿ ಸಿರಸ್ತೇದಾರ್ ಸದಾಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಸರ್ಕಾರದಲ್ಲಿ ಲಂಚ ಕೊಡದೆ ಬಡವರಿಗೆ ಮನೆ ಸಿಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರಿಗೆ ಬೆಲೆ ಇಲ್ಲ. ಲಂಚ ಕೊಟ್ಟು ಯಾರು ಬೇಕಾದರೂ ಸೌಲಭ್ಯ ಪಡೆಯಬಹುದು ಎಂದು ಆರೋಪಿಸಿದ್ದಾರೆ. ಇದರ ಹೊಣೆ ಹೊತ್ತು ವಸತಿ ಸಚಿವ ಜಮೀರ್ ಅಹಮ್ಮದ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿಯಾಗಿ ಆಡಳಿತ ಮಾಡುತ್ತಿದೆ. ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರದಲ್ಲಿ ಅನುದಾನ ಇಲ್ಲ. ಯಡಿಯೂರಪ್ಪ ಆಡಳಿತದಲ್ಲಿ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿದ್ದು ಬಿಟ್ಟರೆ, ಇದುವರೆಗೂ ಕಾಂಗ್ರೆಸ್ ಸರ್ಕಾರ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.

ತಾಲೂಕು ಬಿಜೆಪಿ ಮಂಡಲ ಅಧ್ಕಕ್ಷ ಹಿರೇಮಧುರೆ ಸುರೇಶ್, ಆದಿ ಭಾಸ್ಕರಶೆಟ್ಟಿ, ಜಿ.ಪಿ.ಜಯಪಾಲಯ್ಯ, ಬಾಳೆಕಾಯಿ ರಾಮ್‌ದಾಸ್, ಸೋಮಶೇಖರ್ ಮಂಡಿಮಠ್, ದಿನೇಶ್‌ರೆಡ್ಡಿ, ಕರೀಕೆರೆ ತಿಪ್ಪೇಸ್ವಾಮಿ, ರಾಮಾಂಜಿನೇಯ, ಗೌರಿಪುರ ವೀರಭದ್ರಪ್ಪ, ಕೆ. ಅನಂತ, ಬಿ.ಎಂ. ಶ್ರೀನಿವಾಸ್, ಚನ್ನವೀರಪ್ಪ, ಅಂಬಿಕಾ, ಜಿ.ಟಿ. ನವೀನ್, ಬಿ. ಅಶೋಕ್, ಆರ್. ಕಾಂತರಾಜ್, ರುದ್ರಮುನಿ, ದೊರೆ ನಾಗರಾಜ್, ಸಹನಾ, ಆರ್. ಸುರೇಶ್, ಚಿದಾನಂದಪ್ಪ, ಸಿದ್ದೇಶ್ವರಪ್ಪ, ಓಬಳೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net