ರಾಜ್ಯ ಮಟ್ಟದ ಜನಪದ/ ಕನ್ನಡ ಗೀತೆಗಳ ನೃತ್ಯ(ಗುಂಪು ಸ್ಪರ್ಧೆ) ಸ್ಪರ್ಧೆ

Application
Published on

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘ. ಕಬ್ಬನ್ ಉದ್ಯಾನವನ, ಬೆಂಗಳೂರುರವರು ಪ್ರತೀ ವರ್ಷದಂತೆ ಈ ಬಾರಿಯು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 08 ರಂದು ಕೇಂದ್ರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವುದರಿಂದ, ಕನ್ನಡ ರಾಜ್ಯೋತ್ಸವ-2025 ರ ಅಂಗವಾಗಿ ರಾಜ್ಯ ಮಟ್ಟದ ಜನಪದ/ ಕನ್ನಡ ಗೀತೆಗಳ ನೃತ್ಯ(ಗುಂಪು ಸ್ಪರ್ಧೆ) ಸ್ಪರ್ಧೆ ಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಸ್ಪರ್ಧೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ಖಾಯಂ ನೌಕರರು ಭಾಗವಹಿಸಬಹುದಾಗಿದೆ. ಆಸಕ್ತರು Online Link: https://forms.gle/8pR3m5nXowwQzccs9 ಮೂಲಕ ನವೆಂಬರ್ 02 ರ ಸಂಜೆ 5 ಗಂಟೆಯವರೆಗೆ ನೊಂದಾಯಿಸಿಕೊಳ್ಳಬಹುದಾಗಿದ್ದು, ಪ್ರಥಮ ಬಹುಮಾನ ರೂ 1,00,000-00, ದ್ವಿತೀಯ ಬಹುಮಾನ ರೂ 75,000-00, ತೃತೀಯ ಬಹುಮಾನ ರೂ 50,000-00, ಸಮಾಧಾನಕರ ಬಹುಮಾನ ರೂ 20,000-00 ವನ್ನು ನೀಡಲಾಗುತ್ತದೆ.

ಸ್ಪರ್ಧೆಗಳು ನಡೆಯುವ ಸ್ಥಳ ಮತ್ತು ಕಾರ್ಯಕ್ರಮದ ವಿವರಗಳನ್ನು ನೊಂದಣಿ ಅಂತಿಮ ದಿನಾಂಕದ ನಂತರ ಕೇಂದ್ರ ಸಂಘವು ತಿಳಿಸುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ಅರುಣಕುಮಾರ ಸಿ.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net