ರಾಜ್ಯ ಮಟ್ಟದ ಕುಸ್ತಿಯಲ್ಲಿ ವಿದ್ಯಾರ್ಥಿ ಜ್ಞಾನೇಶ್ ಬಿ.ಸಾಯಿಗೆ ಬಹುಮಾನ

ರಾಜ್ಯ ಮಟ್ಟದ ಕುಸ್ತಿಯಲ್ಲಿ ವಿದ್ಯಾರ್ಥಿ ಜ್ಞಾನೇಶ್ ಬಿ.ಸಾಯಿಗೆ ಬಹುಮಾನ
8
Published on

ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಮೈಸೂರಿನ ಲಕ್ಷ್ಮೀಪುರಂನ ಜೆಎಸ್‌ಎಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್ ಬಿ.ಸಾಯಿ ಬಹುಮಾನ ಗಳಿಸಿದ್ದಾನೆ.

ಶಾಲಾ ಸಾಕ್ಷರತಾ ಇಲಾಖೆ ವತಿಯಿಂದ ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕುಸ್ತಿ ಪಂದ್ಯಾವಳಿಯ 60 ಕೆ.ಜಿ. ವಿಭಾಗದ ಗ್ರೀಕೋ ರೋಮನ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ, ಪಾಲಕರಿಗೆ ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.

ವಿಜೇತ ವಿದ್ಯಾರ್ಥಿಗೆ ಮುಖ್ಯಶಿಕ್ಷಕ ಎಸ್.ನಾಗೇಂದ್ರಪ್ರಸಾದ್, ದೈಹಿಕ ಶಿಕ್ಷಣ ಶಿಕ್ಷಕ ಎಂ.ಆರ್.ರವಿ ಹಾಗೂ ಶಾಲಾ ವೃಂದ ಅಭಿನಂದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net