

ರಾಣೆಬೆನ್ನೂರ: ವಿದ್ಯಾಥಿರ್ಗಳು ಕೌಶಾಲ್ಯಾಧಾರಿತ ಶಿಕ್ಷಣ ಪಡೆದುಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದು ಜಿಪಂ ಮಾಜಿ ಸದಸ್ಯ ಹಾಗೂ ಉದ್ಯಮಿ ಸಂತೋಷಕುಮಾರ ಪಾಟೀಲ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕಾಮರ್ಸ್ ಅಸೋಸಿಯೇಷನ್ 2025&-26 ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥಿರ್ನಿಯರಿಗೆ ಉದ್ಯಮಶೀಲತೆಯ ಮಹತ್ವ, ಆಥಿರ್ಕ ಸಾಕ್ಷರತೆ ಮತ್ತು ವಿದ್ಯಾಥಿರ್ನಿಯರ ಅಭಿವೃದ್ಧಿಯಲ್ಲಿ ವಾಣಿಜ್ಯ ಸಂಘದ ಪಾತ್ರ, ವಿದ್ಯಾಥಿರ್ನಿಯರಿಗೆ ಲಭ್ಯವಿರುವ ಅವಕಾಶಗಳು ಹಾಗೂ ನಾಯಕತ್ವದ ಕೌಶಲಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸಾಮಾಜಿಕ ಚಟುವಟಿಕೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯ ನಾರಾಯಣ ನಾಯಕ, ಉಪನ್ಯಾಸಕರಾದ ನಾಗರಾಜ ಗವಿಯಪ್ಪನವರ, ವಿದ್ಯಾಶ್ರೀ ದಾಮೋದರ, ಸುಜಾತ ಹುಲ್ಲೂರು, ವೀರಣ್ಣ ಸಿ.ಕೆ., ಅಶ್ವಿನಿ ಮೆಹರವಾಡೆ, ನಯನಾ ಕೆರೂಡಿ ಹಾಗೂ ಸಿಬ್ಬಂದಿ ಇದ್ದರು.