ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಹಿರಿಯ ಸಂಸದ!

GSB..
Published on

ತುಮಕೂರು: ಚುನಾವಣಾ ರಾಜಕೀಯಕ್ಕೆ ನೀವೃತ್ತಿ ಘೋಷಿಸುತ್ತಿರುವ ರಾಜಕೀಯ ನಾಯಕರ ಪಟ್ಟಿ ಬೆಳೆಯುತ್ತಲೇ ಇದ್ದು, ಈ ಪಟ್ಟಿಗೆ ತುಮಕೂರು ಸಂಸದ ಜಿ.ಎಸ್.ಬಸವರಾಜು ಹೊಸ ಸೇರ್ಪಡೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಈಗ 84 ವರ್ಷ ವಯಸ್ಸಾಗಿದ್ದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ, ಪಕ್ಷದಿಂದಲೂ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜಿಲ್ಲೆಯಲ್ಲಿ ರಾಜಕೀಯ ಸಭೆಗಳಲ್ಲಿ ಹೇಳಿರುವಂತೆ ತುಮಕೂರಿಗೆ ಮತ್ತೆ ಬಂದು ಸ್ಫರ್ಧಿಸಿದರೆ ಮಾತ್ರ ನಾನು ಸುಮ್ಮನಿರುವುದಿಲ್ಲ ಅವರ ವಿರುದ್ಧ ಕಣಕ್ಕಿಳಿಯುತ್ತೇನೆ, ಬಿಜೆಪಿ ಟಿಕೆಟ್ ನೀಡದಿದ್ದರೂ ಪಕ್ಷೇತರನಾಗಿಯಾದರೂ ಸರಿ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ ಎಂಬ ವಿಪಕ್ಷಗಳ ಆರೋಪ ನಿರಾಧಾರವಾಗಿದೆ, ನಾನೂ ಮಾಜಿ ಸಂಸದನಾಗಿ ಮನೆಯಲ್ಲಿದ್ದಾಗ ಯಾರು ಬಂದು ಮುತ್ತು ಕೊಡುತ್ತಿರಲಿಲ್ಲ, ಎಷ್ಟು ಗೌರವ ಕೊಡಬೇಕೊ ಅಷ್ಟು ಕೊಡುತ್ತಾರೆ ಎಂದರು.
ಬಿಎಸ್‌ವೈ ಇಲ್ಲದೆ ಚುನಾವಣೆ ಎದುರಿಸುವುದು ರಾಜ್ಯ ಬಿಜೆಪಿಗೆ ಕಷ್ಟ, ವಯಸ್ಸಿನ ಕಾರಣದಿಂದ ಚುನಾವಣಾ ರಾಜಕೀಯದಿಂದ ದೂರವಿರುವ ಮಾತನಾಡಿದ್ದಾರೆ ಅಷ್ಟೇ, ಬಿಎಸ್‌ವೈ, ಸಿದ್ಧರಾಮಯ್ಯ ಸೇರಿ ಹೊಸ ಪಕ್ಷ ಕಟ್ಟುತ್ತಾರೆ ಎಂಬುದು ಊಹಾಪೋಹವಷ್ಟೇ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net