*ರಸ್ತೆಯಲ್ಲಿ ನೋಟುಗಳನ್ನು ಎಸೆದು ಪರಾರಿಯಾದ ಯುವಕ* !

Published on

ಉಡುಪಿ: ಲಾಕ್ ಡೌನ್ ಅವಧಿಯಲ್ಲಿ ಕೆಲವರ ಪುಂಡಾಟ ಪೊಲೀಸರು ಮತ್ತು ಸಾರ್ವಜನಿಕರ ತಲೆನೋವಿಗೆ ಕಾರಣವಾಗಿದೆ. ನಗರದಲ್ಲಿ ಯುವಕನೊರ್ವ ಐನೂರು, ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ಎಸೆದು ಅಚ್ಚರಿ, ಆತಂಕ ಮೂಡಿಸಿದ ಘಟನೆ ನಡೆದಿದೆ. ನಗರದ ಕೃಷ್ಣ ಮಠ ಸಮೀಪ ವಾದಿರಾಜ ನಗರ ರಸ್ತೆಯಲ್ಲಿ ನೋಟುಗಳನ್ನು ಎಸೆದು ಪರಾರಿಯಾಗಿದ್ದಾನೆ. ಇದನ್ನು ಕಂಡ ಕೆಲವು ಸಾರ್ವಜನಿಕರು ನೋಟುಗಳನ್ನು ಕೈಗೆತ್ತಿಕೊಂಡು ನೋಡಿದ್ದಾರೆ. ಕೆಲವರು ಆ ಯುವಕನ ಬೆನ್ನಟ್ಟಿದ್ದು, ಯುವಕ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಯುವಕ ಬಿಸಾಡಿದ್ದ ಕೆಲ‌ ನೋಟುಗಳನ್ನು ನೀಡಿದ್ದಾರೆ. ಈ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ ನಗರ ಪೊಲೀಸರು ಮಕ್ಕಳಾಡುವ 500, 2000 ಮುಖ ಬೆಲೆಯ ನಕಲಿ ನೋಟುಗಳನ್ನು ಬಿಸಾಡಿ, ಅಪರಿಚಿತ ಯುವಕ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಯುವಕನ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net