ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

ctd 17 strike.jpgnn
Published on

ಚಿತ್ರದುರ್ಗ:ನಗರದ ಹಲವೆಡೆ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ವಿಳಂಬ ಖಂಡಿಸಿ ನಗರದ ಸಂಗೋಳ್ಳಿ ರಾಯಣ್ಣ ಸರ್ಕಲ್ ಬಳಿ ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಕರ್ನಾಟಕ ನವ ನಿರ್ಮಾಣ ಸೇನೆ ಕಾರ‌್ಯಕರ್ತರನ್ನು ಕೋಟೆ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಯುಜಿಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿ ಹಲವು ತಿಂಗಳಾದರೂ ಪೂರ್ಣಗೊಳ್ಳದೇ ವಾಹನ ಸವಾರರಿಗೆ,ಪಾದಾಚಾರಿಗಳಿಗೆ ತೊಂದರೆಯಾಗಿದೆ. ಜನ ನಿತ್ಯ ಧೂಳಿನಲ್ಲಿ ಮುಳುಗೇಳುವಂತಾಗಿದೆ. ಇತ್ತ ಕಡೆ ಗಮನ ಹರಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಪ್ರತಿಭಟನಾನಿರತರು ದೂರಿದರು.
ಪ್ರತಿಭಟನೆಯಿಂದಾಗಿ ಕೆಲ ಕಾಲ ಈ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಮನವೊಲಿಕೆಗೆ ಜಗ್ಗದ 10 ಕಾರ‌್ಯಕರ್ತರನ್ನು ಪಿ ಎಸ್‌ಐ ಎಚ್.ಗಾದಿಲಿಂಗ ವಶಕ್ಕೆ ಪಡೆದರು. ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್,ವೀಣಾಗೌರಣ್ಣ,ಬಿ.ಅನಿಲ್‌ಕುಮಾರ್,ಎಂ.ತಿಪ್ಪೇಸ್ವಾಮಿ,ಮಂಜುನಾಥ್, ಚೌಡೇಶ್,ಓಬಳೇಶ್,ಧನರಾಜ್,ಶಿವರಾಜ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net