

ಚಿತ್ರದುರ್ಗ: ನಗರದ ರಾ.ಹೆ.13ರ ಪೊಲೀಸ್ ಗೆಸ್ಟ್‌ಹೌಸ್ ಬಳಿ ಮಂಗಳವಾರ ಸಂಜೆ ಬೈಕ್-ಲಾರಿ ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಎಸ್‌ಎಸ್‌ಆರ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಚೇತನ್‌ಕುಮಾರ್(17) ಮೃತ ದುರ್ದೈವಿ. ತರಗತಿ ಮುಗಿಸಿಕೊಂಡು ಬ್ಯಾಂಕ್ ಕಾಲನಿಯಲ್ಲಿರುವ ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ನಡೆದಿದೆ. ಅಪಘಾ ತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.