ರಸಾಯನಶಾಸ್ತ್ರ ಶಿಬಿರ ನಾಳೆಯಿಂದ

science fair
Published on

ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಇಂಡಿಯಾ ಹಾಗೂ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗಳ ಸಂಯುಕ್ತಾಶ್ರಯದಲ್ಲಿ ಡಿ.9ರಿಂದ 11ರವರೆಗೆ ನಗರದ ಜೆಎಸ್‌ಎಸ್ ಔಷಧ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ರಸಾಯನಶಾಸ್ತ್ರ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಟಿ.ಎಂ.ಪ್ರಮೋದ್‌ಕುಮಾರ್ ಹೇಳಿದರು.

ರಾಜ್ಯದ 9ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದ ಬಗ್ಗೆ ಆಸಕ್ತಿ, ಕುತೂಹಲ, ಪ್ರೇರೇಪಿಸುವುದು ಮತ್ತು ಉತ್ತೇಜಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಶಿಬಿರದಲ್ಲಿ ಮೈಸೂರು (ಗ್ರಾಮೀಣ ಮತ್ತು ನಗರ), ಬೆಳಗಾವಿ, ಗದಗ, ಧಾರವಾಡ, ಹಾವೇರಿ ಮತ್ತು ಚಿಕ್ಕೋಡಿ ಜಿಲ್ಲೆಗಳ ವಿವಿಧ ಸರ್ಕಾರಿ ಶಾಲೆಗಳ 9ನೇ ತರಗತಿಯ 93 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಿಬಿರ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದ ಪ್ರಯೋಗಗಳಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟು, ವಿಷಯದ ಬಗ್ಗೆ ಜಾಗೃತಿ ಮತ್ತು ದೀರ್ಘಕಾಲಿಕ ಆಸಕ್ತಿ ಬೆಳೆಸಲು ಪ್ರೇರೇಪಿಸುತ್ತದೆ. ಅಲ್ಲದೆ, ಕಾರ್ಯಕ್ರಮ ವಿಶ್ವವಿದ್ಯಾಲಯ-ಪ್ರಯೋಗಾಲಯಗಳಲ್ಲಿ ಕೈಗೊಳ್ಳಬಹುದಾದ ಪ್ರಾಯೋಗಿಕ ಚಟುವಟಿಕೆಗಳು, ಆಸಕ್ತಿಯ ರಾಸಾಯನಿಕ ಪ್ರದರ್ಶನಗಳು, ಸಮಾನ ಮನಸ್ಸಿನ ವಿದ್ಯಾರ್ಥಿಗಳನ್ನು ಭೇಟಿಯಾಗುವ ಅವಕಾಶ ನೀಡುತ್ತದೆ ಎಂದರು.

ಡಿ. 9ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಕುಲಪತಿ ಡಾ.ಎಚ್.ಬಸವನಗೌಡಪ್ಪ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.

ಶಿಬಿರ ಸಂಯೋಜಕ ಡಾ.ಬಿ.ಎಂ.ಗುರುಪಾದಯ್ಯ, ಮೆಲ್ಲಿಸಾ, ಡಾ.ಜಿ.ವಿ.ಪೂಜಾರ್, ಬಿ.ಆರ್.ಪ್ರಶಾಂತ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net