ರಕ್ತದಾನದಿಂದ ಆರೋಗ್ಯ ವೃದ್ಧಿ

14 nrp 3 blood
ಎನ್.ಆರ್.ಪುರದಲ್ಲಿ ರಕ್ತದಾನ ಶಿಬಿರವನ್ನು ಪಿಎಸ್‌ಐ ಬಿ.ಎಸ್.ನಿರಂಜನ್‌ಗೌಡ ಉದ್ಘಾಟಿಸಿದರು. ಗಿರಿರಾಜ್, ಉಲ್ಲಾಸ್, ರವಿಕುಮಾರ್, ಡಾ. ಅತಿರ, ವಿಲ್ಸ, ಪ್ರಿಯೇಶ್ ಇತರರಿದ್ದರು.
Published on

ಎನ್.ಆರ್.ಪುರ: ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಇದರಿಂದ ಮತ್ತೊಬ್ಬರ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ಪಿಎಸ್‌ಐ ನಿರಂಜನ್ ಗೌಡ ತಿಳಿಸಿದರು.

ಮಿನಿ ವಿಧಾನಸೌಧ ಬಳಿ ವಿಲ್ಸನ್ ಮಲ್ನಾಡ್ ಾಸ್ಟ್ ುಡ್, ಬಿನು ಕಾರ್ಬನ್ ಕೇರ್ ಹಾಗೂ ಶಿವಮೊಗ್ಗದ ಆಶಾ ಜ್ಯೋತಿ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಯಬೇಕು. ಇದರಿಂದ ಸ್ಥಳೀಯರಿಗೆ ತುರ್ತು ರಕ್ತದ ಅವಶ್ಯಕತೆ ಪೂರೈಸಬಹುದು. ಒಬ್ಬರು ರಕ್ತದಾನ ಮಾಡಿದರೆ 3 ಜನರ ಜೀವ ಉಳಿಸಬಹುದು. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದರು.

ಎನ್.ಆರ್.ಪುರದ ಅಭಿನವ ಗಿರಿರಾಜ್ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 53 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಆಶಾ ರಕ್ತ ನಿಧಿ ಕೇಂದ್ರದ ಸ್ವಾಮಿ, ಉಲ್ಲಾಸ್, ರವಿಕುಮಾರ್, ಡಾ. ಅತಿರ, ಆಯೋಜಕರಾದ ವಿಲ್ಸ, ಸಜಿಪ, ಪ್ರಿಯೇಶ್, ಬಿನು, ರೋಬಿನ್, ಆನ್ಸನ್, ನಿಖಿಲ್, ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net