ರಂಗಾಯಣದಲ್ಲಿ 22 ರಿಂದ ನವರಾತ್ರಿ ರಂಗೋತ್ಸವ

YLP DRAMA
Published on

ನಗರದ ರಂಗಾಯಣದಲ್ಲಿ ‘ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ನವರಾತ್ರಿ ರಂಗೋತ್ಸವ’ವನ್ನು ಸೆ.22 ರಿಂದ ಅ.1 ರವರೆಗೆ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ಸೆ.22 ರಂದು ಸಂಜೆ 5.30ಕ್ಕೆ ನಾಟಕೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಚಾಲನೆ ನೀಡಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎಂ.ವಿ.ವೆಂಕಟೇಶ್, ನಿರ್ದೇಶಕಿ ಕೆ.ಎಂ.ಗಾಯತ್ರಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಇತರರು ಭಾಗವಹಿಸಲಿದ್ದಾರೆ. ಇದೇ ವೇಳೆ ಕಲಾವಿದ ಧರ್ಮೇಂದ್ರ ಅರಸ್ ಅವರಿಗೆ ನವರಾತ್ರಿ ರಂಗಗೌರವ ನೀಡಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರತಿದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. ಸೆ.22 ರಂದು ‘ಶರೀಫ’, 23 ರಂದು ‘ನೋವಿಗದ್ದಿದ ಕುಂಚ’, 24 ರಂದು ‘ರಾಕ್ಷಸ’, 25 ರಂದು ‘ಚಿತ್ರಪಟ ರಾಮಾಯಣ’, 26 ರಂದು ‘ಶ್ರೀ ತಿಮ್ಮಾರ್ಪಣಮಸ್ತು’, 27 ರಂದು ‘ಕಲ್ಯಾಣದ ಬಾಗಿಲು’, 28 ರಂದು ‘ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ’, 29 ರಂದು ‘ಮಾದಾರಿ ಮಾದಯ್ಯ’, 30 ರಂದು ‘ಜಾತ್ರೆ’, ಅ.1 ರಂದು ‘ಜನ ಗಣ ಮನ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನಾಟಕ ಪ್ರದರ್ಶನಕ್ಕೂ ಮುನ್ನ ಪ್ರತಿ ದಿನ ಸಂಜೆ 5.30ಕ್ಕೆ ವನರಂಗದಲ್ಲಿ ಅಂತಾರಾಜ್ಯ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಲಿದೆ. ಲಂಬಾಡಿ/ಮಾತುರಿ(ತೆಲಂಗಾಣ), ಲಾವಣಿ, ಹೋಲಿ(ಮಹಾರಾಷ್ಟ್ರ), ಸಿದ್ದಿ ಢುಮಾಲ್(ಗುಜರಾತ್), ಸಂಬಲ್‌ಪುರಿ(ಒಡಿಶಾ), ತಿರುವತ್ತಿರಕಳಿ ಮತ್ತು ಒಪ್ಪಾನ(ಕೇರಳ), ಸೋರ‌್ತಾ ಮತ್ತು ಸೈತಾಮ್(ಮಧ್ಯಪ್ರದೇಶ), ರಥ್ವಾ(ಗುಜರಾತ್), ತಪ್ಪಾಟ್ಟುಗಳು(ಆಂಧ್ರಪ್ರದೇಶ), ಕರಗಂ, ಕಾವಾಡಿ, ತಪ್ಪಟ್ಟಮ್(ತಮಿಳುನಾಡು) ನೃತ್ಯ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.

ರಂಗ ಸಮಾಜದ ಸದಸ್ಯ ಎಚ್.ಎಸ್.ಸುರೇಶ್‌ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಂಚಾಲಕರಾದ ಕೆ.ಆರ್.ನಂದಿನಿ, ಬಿ.ಎನ್.ಶಶಿಕಲಾ, ರಂಗಾಯಣ ಉಪ ನಿರ್ದೇಶಕ ಸುದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net