ರಂಗಭೂಮಿ ಮೂಲಕ ಮಕ್ಕಳಿಗೆ ಆರೋಗ್ಯದ ಅರಿವು ಅಗತ್ಯ

1
Published on

ಇಂದಿನ ಮಕ್ಕಳ ಕೈಯಲ್ಲಿ ಮೊಬೈಲ್ ಬಂದಿದೆ ಹಾಗೂ ಜಂಕ್-ುಡ್ ಹಾವಳಿ ಹೆಚ್ಚಾಗಿದ್ದು, ಸಣ್ಣ ಮಕ್ಕಳಲ್ಲೂ ಹೊಟ್ಟೆ ಬರುತ್ತಿದೆ. ಹೀಗಾಗಿ ರಂಗಭೂಮಿಯ ಮುಖಾಂತರ ಮಕ್ಕಳಿಗೆ ಆರೋಗ್ಯದ ಪ್ರಾಮುಖ್ಯತೆಯನ್ನು ತಿಳಿಸುವಂತಹ ಕೆಲಸವಾಗಬೇಕು ಎಂದು ಚಲನಚಿತ್ರ ನಿದೇರ್ಶಕ ಹಾಗೂ ಸಾಹಿತಿ ಯೋಗರಾಜ ಭಟ್ ಸಲಹೆ ನೀಡಿದರು.

ನಗರದ ದಟ್ಟಗಳ್ಳಿಯಲ್ಲಿರುವ ಸುಪ್ರೀಮ್ ಪಬ್ಲಿಕ್ ಶಾಲೆ ಆವರಣದಲ್ಲಿ ನಟನ ಮೈಸೂರು ಸಂಸ್ಥೆಯ ವತಿಯಿಂದ ಆಯೋಜಿಸಿರುವ ರಜಾಮಜಾ ಬೇಸಿಗೆ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಸಾವಯವ ಆಹಾರ ಕಳೆದ 20 ವರ್ಷಗಳಿಂದ ಕಣ್ಮರೆಯಾಗಿದೆ. ಹೀಗಾಗಿ ಆಹಾರದ ಪ್ರಾಮುಖ್ಯತೆಯನ್ನು ಈ ವಯಸ್ಸಿನಲ್ಲಿಯೇ ತಿಳಿಸಬೇಕು ಎಂದು ಸಲಹೆ ನೀಡಿದರು.

ರಂಗಭೂಮಿಯು ನಟನೆ, ಭಾಷೆಯ ಜತೆಗೆ ಬದುಕಿನ ಪಾಠ ಕಲಿಸಿಕೊಡುತ್ತದೆ. ಒಂದು ಶಾಲೆಯು ಕಲಿಸದೆ ಇರುವ ಪಾಠವನ್ನು ರಂಗಭೂಮಿಯಿಂದ ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.

ನಮಗೆ ಅಜ್ಜಿಮನೆಯೇ ಬೇಸಿಗೆ ಶಿಬಿರವಾಗಿತ್ತು. ಅಂದು ಅಜ್ಜ-ಅಜ್ಜಿಯರು ತೋರಿಸುತ್ತಿದ್ದ ಪ್ರೀತಿ ಇಂದು ಕಾಣದಂತಾಗಿದೆ. ರಂಗಭೂಮಿಯಿಂದ ಹೋದವರು ಇಂದು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ರಾಮೇಶ್ವರಂ ಕೆೆಯ ಮಾಲೀಕ ರಾಘವೇಂದ್ರ ರಾವ್ ಮಾತನಾಡಿ, ರಂಗಭೂಮಿಯೂ ನಾವು ಮಾಡುವ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂದು ಕಲಿಸಿಕೊಡುತ್ತದೆ. ಹೀಗಾಗಿ ಇಲ್ಲಿ ಬಂದಿರುವ ಪ್ರತಿಯೊಬ್ಬ ಮಕ್ಕಳು ಮುಂದೆ ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ. ಇಂತಹ ಬೇಸಿಗೆ ಶಿಬಿರವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ರಂಗಭೂಮಿಯ ಹಿರಿಯ ಕಲಾವಿದೆಯರಾದ ರಾಧಾ, ರುಕ್ಮಿಣಿ ಅವರಿಗೆ 2025ನೇ ಸಾಲಿನ ನಟನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸುಪ್ರೀಮ್ ಪಬ್ಲಿಕ್ ಶಾಲೆಯ ಸ್ಥಾಪಕ ರವೀಂದ್ರ ಸ್ವಾಮಿ, ನಟನ ಮೈಸೂರು ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಆನಂದ ಬಾಬು, ಸಂಸ್ಥಾಪಕ ಕಾರ್ಯದರ್ಶಿ ಮಂಡ್ಯರಮೇಶ್, ಹಿರಿಯ ನಟ ಜಿ.ವಿ. ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net