ಯೋಗಾಸನ ಭಾರತದ ಹೆಮ್ಮೆ

21 nrp 7. yoga
ಎನ್.ಆರ್.ಪುರ ಕೆಪಿಎಸ್‌ನಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.
Published on

ಎನ್.ಆರ್.ಪುರ: ಪತಂಜಲಿ ಮಹಿರ್ಷಿಯಿಂದ ಪ್ರಾರಂಭವಾದ ಯೋಗಾಸನ ನಮ್ಮ ದೇಶದ ಹೆಮ್ಮೆಯಾಗಿದೆ ಎಂದು ಮುಖ್ಯಶಿಕ್ಷಕಿ ಪಿ.ವಿ.ನಿಶಾ ಹೇಳಿದರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಅವರು ಪಟ್ಟಣದ ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶನಿವಾರ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ದೇಹದ ಬೆಳವಣಿಗೆಯಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಯೋಗದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳು ಪ್ರತಿನಿತ್ಯ ಯೋಗ ಮಾಡುವುದು ಒಳ್ಳೆಯದು ಎಂದರು. ಕಲಾವಿದ ಅಭಿನವ ಗಿರಿರಾಜ್ ಅವರು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಅವರೇ ಗೀತೆ ರಚನೆ ಮಾಡಿದ ಯೋಗದ ಹಾಡನ್ನು ಹಾಡಿದರು. ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮನ್ವಯಾಧಿಕಾರಿ ಸೇವ್ಯಾನಾಯ್ಕಾ, ಬಿಐಇಆರ್ ಟಿ.ತಿಮ್ಮೇಶಪ್ಪ, ಶಿಕ್ಷಕಿಯರಾದ ನೀಲೋವರ್, ಶ್ವೇತಾ, ಉಮಾ ದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net