

ನಾಡಹಬ್ಬ ಮೈಸೂರು ದಸರಾ ಮಹೋತ್ಸವ, ಯೋಗ ದಸರಾ ಉಪ ಸಮಿತಿ -2025 ರ ವತಿಯಿಂದ ಸೆಪ್ಟೆಂಬರ್ 22 ರಂದು ಆಯೋಜಿಸಲಾಗಿರುವ ಯೋಗ ದಸರಾ ಉದ್ಘಾಟನೆ ಮತ್ತು ನೃತ್ಯರೂಪಕ ಕಾರ್ಯಕ್ರಮದಲ್ಲಿ ಯೋಗದಲ್ಲಿ ಸಾಧನೆ ಮಾಡಿರುವ ಯೋಗ ಸಾಧಕರಿಗೆ "ಯೋಗಶ್ರೀ" ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಯೋಗಶ್ರೀ ಪ್ರಶಸ್ತಿಗೆ ಆಶಾದೇವಿ ಎನ್, # 615,5 ನೇ ಕ್ರಾಸ್, ಕುಂಬಾರಗೇರಿ ಚಾಮರಾಜ, ಮೊಹಲ್ಲ ಮೈಸೂರು. ಎನ್ ಪಶುಪತಿ (ಶಿಕ್ಷಕರು) ಶ್ರೀ ರಾಘವೇಂದ್ರ ಯೋಗ, # 668/640 13 ನೇ ಕ್ರಾಸ್ 3ನೇ ಹಂತ ಯಾರಗನಹಳ್ಳಿ ಹೊಸ ಬಡಾವಣೆ ಗೋಪಿಕಾ ಸ್ಕೂಲ್ ಹತ್ತಿರ ಮೈಸೂರು. ಆರ್ ಶೈಲಜಾ (ಯೋಗ ಶಿಕ್ಷಕರು), #16/ಬಿ ಶಂಕರ ಮಠದ ರಸ್ತೆ 3 ನೇ ಕ್ರಾಸ್ ಖಿಲ್ಲೆ ಮೊಹಲ್ಲಾ (ಜೆ. ಎಸ್.ಎಸ್. ಆಸ್ಪತ್ರೆ ಹತ್ತಿರ) ಮೈಸೂರು-570004. ನಂದಿನಿ ನರಸಿಂಹಮೂರ್ತಿ , #002 ಪ್ರಕೃತಿ ಶ್ರೀಕಂಠ, 1 ನೇ ಅಂತ ಪರಮಹಂಸ ರೋಡ್ ಯಾದವಗಿರಿ-570020. ಮಣಿಕಂಠನ್,# 4763, ಯೋಗಾಮೃತ ನಿಲಯ, 4ನೇ ಹಂತ ವಿಜಯನಗರ ಮೈಸೂರು. ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿ ಹಾಗೂ ಯೋಗ ದಸರಾ ಉಪ ಸಮಿತಿಯ ಕಾರ್ಯದರ್ಶಿಗಳಾದ ಡಾ. ರೇಣುಕಾದೇವಿ.ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.