

ಯಗಟಿಪುರ: ಕಡೂರು ತಾಲೂಕು ಅಣ್ಣಿಗೆರೆ ಗ್ರಾಮದ ಡಾ. ವೈ.ಸಿ.ವಿಶ್ವನಾಥ್ ಸ್ಮಾರಕ ಸಭಾಂಗಣದಲ್ಲಿ ಯಶಸ್ವಿನಿ ಯೋಗ ಸಂಸ್ಥೆಯಿಂದ ಯೋಗ ದಿನ ಆಚರಿಸಲಾಯಿತು. ಯೋಗ ಸಂಸ್ಥೆ ಸಂಸ್ಥಾಪಕ ಬಿ.ಸಿ.ದೇವೇಂದ್ರಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದ ನಿರಂತರವಾಗಿ ಯೋಗ ವಿದ್ಯೆಯನ್ನು ನೂರಾರು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗಿದೆ ಎಂದರು. ಶಿಕ್ಷಕ ವೈ.ಜಿ.ಪ್ರಹ್ಮಾದ ಮಾತನಾಡಿ, ಯೋಗದಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧ್ಯ ಎಂದರು. ಐಎಫ್‌ಎಸ್‌ನಲ್ಲಿ 98ನೇ ರ‌್ಯಾಂಕ್ ಪಡೆದ ಎಸ್.ಎಂ.ವಿಶ್ವಾಸ್ ಅವರನ್ನು ಸನ್ಮಾನಿಸಲಾಯಿತು. ಸಿಂಗಟಗೆರೆ ಕಲ್ಲೇಶ್ವರ ದೇವಾಲಯ ಅಧ್ಯಕ್ಷ ನಾಗರಾಜಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ವಿರೂಪಾಕ್ಷಪ್ಪ, ಉಪಾಧ್ಯಕ್ಷ ಯಗಟಿಪುರ ಪ್ರಸನ್ನ, ಪ್ರಮುಖರಾದ ತಮ್ಮಯ್ಯ, ನಾಗರಾಜು ಇತರರಿದ್ದರು.