

ಕಳಸ: ಯಾವುದೇ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಯೋಗಕ್ಕಿದೆ ಎಂದು ಯೋಗ ಗುರು ಅಂಜನಾ ದೇವಿ ಹೇಳಿದರು. ಕನ್ನಡ ಜಾನಪದ ಪರಿಷತ್‌ನಿಂದ ಅಡ್ಕೋಡು ಹಳ್ಳಿಮನೆಯಲ್ಲಿ ಏರ್ಪಡಿಸಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್ವ ರೋಗಗಳಿಗೂ ಯೋಗವೇ ಮದ್ದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್ ಮಾತನಾಡಿ, ಕನ್ನಡ ಜಾನಪದ ಪರಿಷತ್ ಮನೆಯಂಗಳಕ್ಕೆ ಹೋಗಿ ಅಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಈ ಬಾರಿ ಯೋಗ ಗುರು ಅಂಜನಾ ದೇವಿ ಅವರ ಮನೆಯಲ್ಲಿ ಕಾರ್ಯಕ್ರಮ ಮಾಡಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ, ಅಂಜನಾ ದೇವಿ ಬಾಲ್ಯದಿಂದಲೂ ಯೋಗವನ್ನು ಅಭ್ಯಾಸ ಮಾಡುತ್ತಿರುವ ಕಾರಣ ಇಳಿ ವಯಸ್ಸಿನಲ್ಲೂ ಆರೋಗ್ಯವಂತರಾಗಿರಲು ಕಾರಣ ಎಂದು ಹೇಳಿದರು.
ಹಿರಿಯ ಯೋಗಪಟು ಅಂಜನಾ ದೇವಿ ಅವರನ್ನು ಗೌರವಿಸಲಾಯಿತು. ಯೋಗ ಗುರು ವೈ.ಪ್ರೇಮಕುಮಾರ್, ಪಾಂಡುರಂಗ, ವಿನಾಯಕ, ಅನಿಲ್, ಕಲ್ಪನಾ ಅಜಿತ್, ಮಂಜುಳಾ, ರಾಧಿಕಾ ಕಿರಣ್, ಅಮಿತಾ ವಿನಾಯಕ ಇತರರಿದ್ದರು.