

ಬೀದರ್: ಯೋಗ ನಿತ್ಯ ಜೀವನದ ಭಾಗವಾಗಬೇಕು ಎಂದು ಪ್ರಾಚಾರ್ಯ ಡಾ. ಸೂರ್ಯಕಾಂತ ಚಿದ್ರೆ ಹೇಳಿದರು.
ಔರಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಯೋಗ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗದಿಂದ ಉತ್ತಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಬಹುದು. ಸದೃಢ ರಾಷ್ಟ್ರ ಕಟ್ಟಬಹುದು ಎಂದು ತಿಳಿಸಿದರು.
ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಊರ್ವಶಿ ಕೊಡ್ಲಿ ಅವರು ಯೋಗದ ಮಹತ್ವ ಮನದಟ್ಟು ಮಾಡಿಕೊಟ್ಟರು.
ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಪ್ರಕಾರಗಳ ಅಭ್ಯಾಸ ಮಾಡಿಸಲಾಯಿತು. ಕಾಲೇಜು ಸಿಬ್ಬಂದಿ ಕಾರ್ಯದರ್ಶಿ ವೇದಪ್ರಕಾಶ ಆರ್ಯ, ಸಾಂಸ್ಕøತಿಕ ಸಂಯೋಜಕ ಡಾ. ಅಶೋಕ ಕೋರೆ, ಐಕ್ಯೂಎಸಿ ಸಂಯೋಜಕಿ ಡಾ.ಜೈಶೀಲಾ ಬಿ, ಎನ್.ಎಎಸ್.ಎಸ್. ಸಂಯೋಜಕ ವಿನಾಯಕ ಬಿ. ಕೊತಮಿರ, ಅಂಬಿಕಾದೇವಿ ಇದ್ದರು.
ಪ್ರಾಧ್ಯಾಪಕ ಡಾ. ಸಂಜೀವಕುಮಾರ ತಾಂದಳೆ ಸ್ವಾಗತಿಸಿದರು. ಡಾ. ಊರ್ವಶಿ ಕೊಡ್ಲಿ ನಿರೂಪಿಸಿದರು. ಸಮಾಜಶಾಸ್ತ್ರ ಪ್ರಾಧ್ಯಾಪಕ ಮಹೇಶಕುಮಾರ ವಂದಿಸಿದರು.